ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಹೊಸ ನಾಯಕ..! ಯಾರು ಗೊತ್ತಾ..?

ಪಾಕಿಸ್ತಾನ: ಶ್ರೀಲಂಕಾ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತುಹೋದ ಬಳಿಕ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೆ ಟೆಸ್ಟ್ ಮತ್ತು ಟಿ-20 ತಂಡದಿಂದಲೇ ಹೊರಗಿಡಲಾಗಿದೆ. ಹೀಗಂತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್​ ಅಧ್ಯಕ್ಷ ಎಹಸಾನ್ ಮನಿ ಹೇಳಿದ್ದಾರೆ. ಜೊತೆಗೆ ಇದೊಂದು ಕಠಿಣ ನಿರ್ಧಾರವಾಗಲಿದ್ದು, ಇತ್ತೀಚೆಗೆ ಸರ್ಪರಾಜ್ ಅಹ್ಮದ್ ಫಾರ್ಮ್​​ನಲ್ಲಿ ಇರಲಿಲ್ಲ. ಹೀಗಾಗಿ ತಂಡದ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಅಂದ್ರು.

2019-20ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​​ಗೆ ಅಜರ್ ಅಲಿಯವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಮುಂಬರುವ ಟಿ-20 ವಿಶ್ವಕಪ್​​ಗೆ ಬಾಬರ್ ಆಜಂ ಅವರನ್ನು ಪಾಕ್ ತಂಡದ ನಾಯಕನನ್ನಾಗಿ ಆರಿಸಲಾಗಿದೆ.

ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯಾ ನಡುವೆ ಟಿ-20 ಸರಣಿ ನಡೆಯಲಿದೆ.

Contact Us for Advertisement

Leave a Reply