ರಷ್ಯಾ ಮಾಡಿದ್ದು ಎಂಥಾ ವಿಧ್ವಂಸ ಗೊತ್ತಾ? ಸ್ಯಾಟಲೈಟ್ ಚಿತ್ರಗಳಲ್ಲಿ ಬಯಲು!

masthmagaa.com:

ಯುಕ್ರೇನ್​ ಮತ್ತು ರಷ್ಯಾ ಯುದ್ಧ ಸಂಬಂಧ ಅಮೆರಿಕದ ಉಪಗ್ರಹ ಸಂಸ್ಥೆ ಮಾಕ್ಸಾರ್ ಟೆಕ್ನಾಲಜೀಸ್ ದಿನವೂ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡ್ತಿದೆ. ಈಗ ಮತ್ತೆ ಮಾರಿಯೋಪೋಲ್ ಮತ್ತು ರಾಜಧಾನಿ ಕಿಯೆವ್​​ನ ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದೆ. ನಿನ್ನೆ ತೆಗೆದ ಫೋಟೋ ಇದಾಗಿದ್ದು, ಮಾರಿಯೋಪೋಲ್​ನಲ್ಲಿ ದಾಳಿ ನಡೀತಿರೋದು, ಕಟ್ಟಡಗಳಿಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರೋ ದೃಶ್ಯ ಸೆರೆಯಾಗಿದೆ. ಜನವಸತಿ ಪ್ರದೇಶದ ದೊಡ್ಡ ದೊಡ್ಡ ಕಟ್ಟಡಗಳು, ಅಪಾರ್ಟ್​ಮೆಂಟ್​​ಗಳು ಧ್ವಂಸಗೊಂಡಿರೋದು ಕೂಡ ಈ ಚಿತ್ರದಲ್ಲಿ ಸೆರೆಯಾಗಿದೆ. ಕಿಯೆವ್​ನ ಮಾಸ್​ಚುನ್​ ಪ್ರದೇಶದಲ್ಲೂ ಇದೇ ರೀತಿಯ ಚಿತ್ರಣ ಸೆರೆಯಾಗಿದೆ.

-masthmagaa.com

Contact Us for Advertisement

Leave a Reply