ಅಮೆರಿಕ ಉಪಗ್ರಹ ಚಿತ್ರದಲ್ಲಿ ಕಂಡ ರಷ್ಯಾ- ಯುಕ್ರೇನ್‌ ಯುದ್ಧ ಭೀಕರತೆ!

masthmagaa.com:

ಯುಕ್ರೇನ್​​ನಲ್ಲಿ ರಷ್ಯಾದ ಆಕ್ರಮಣ ಕುರಿತಂತೆ ಅಮೆರಿಕದ ಉಪಗ್ರಹ ಸಂಸ್ಥೆ ಮಾಕ್ಸರ್ ಟೆಕ್ನಾಲಜೀಸ್​ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ ಯುಕ್ರೇನ್​ನಲ್ಲಿ ರಷ್ಯಾದ ಅಬ್ಬರ ಹೇಗಿದೆ ಅನ್ನೋದು ಗೊತ್ತಾಗುತ್ತೆ. ಇದ್ರಲ್ಲಿ ಕಿಯೆವ್​​, ಚೆರ್ನಿಹಿವ್, ಚೆರ್ನೊಬಿಲ್​​ನ 15 ಸಾವಿರ ಚದರ ಕಿಲೋಮೀಟರ್​ನಷ್ಟು ಭೂಭಾಗ ಕವರ್ ಆಗಿದೆ. ಇದ್ರಲ್ಲಿ ಕಿಯೆವ್ ಬಳಿ ಇರೋ ಅಂಟಾನೋವ್ ಏರ್​ಪೋರ್ಟ್ ಬಳಿ ರಷ್ಯನ್ ವಾಹನಗಳು ಚೆಲ್ಲಾಪಿಲ್ಲಿಯಾಗಿರೋದನ್ನು ನೋಡಬಹುದು. ಇವುಗಳನ್ನು ಯುಕ್ರೇನ್ ಸೇನೆ ಆ್ಯಂಟಿ ಟ್ಯಾಂಕ್ ಮಿಸೈಲ್​ಗಳ ಮೂಲಕ ಟಾರ್ಗೆಟ್ ಮಾಡಿರೋದು ಅಂತ ಅಮೆರಿಕನ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಇನ್ನು ಮತ್ತೊಂದಷ್ಟು ಉಪಗ್ರಹ ಚಿತ್ರಗಳು ಕಮರ್ಷಿಯಲ್ ಮತ್ತು ಜನವಸತಿ ಕಟ್ಟಡಗಳು ಧ್ವಂಸವಾಗಿರೋದನ್ನು ತೋರಿಸ್ತಿವೆ. ವೇರ್​ಹೌಸ್​ಗಳಲ್ಲಿ, ಇಂಡಸ್ಟ್ರಿಯಲ್ ಪ್ರದೇಶಗಳಲ್ಲಿ ದಾಳಿ ನಡೆದು, ಹೊಗೆ ಹೋಗ್ತಿರೋದು ಕೂಡ ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ. ಜೊತೆಗೆ ಮತ್ತೊಂದು ಚಿತ್ರದಲ್ಲಿ ಪಶ್ಚಿಮ ಕಿಯೆವ್​​ನ ಬೆರೆಸ್​ಟ್ಯಂಕದಲ್ಲಿ ರಷ್ಯಾದ ಸೇನಾ ವಾಹನಗಳು ಸಾಲುಗಟ್ಟಿ ಹೋಗ್ತಿರೋದು ಕೂಡ ಸೆರೆಯಾಗಿದೆ.

-masthmagaa.com

Contact Us for Advertisement

Leave a Reply