ಸೌದಿ ಅರೇಬಿಯಾ ರಾಜಕುಟುಂಬದ ಮೂವರು ಸದಸ್ಯರ ಬಂಧನ..!

masthmagaa.com:

ಸೌದಿ ಅರೇಬಿಯಾದಲ್ಲಿ ರಾಜಕೀಯ ಅಸ್ಥಿರತೆಯ ಸುದ್ದಿಯೊಂದು ಹೊರಬಿದ್ದಿದೆ. ಕಿಂಗ್ ಶಾಹಿ ಮಹಲ್​​​ನಿಂದ ಮೂವರು ಸದಸ್ಯರನ್ನು ಸೌದಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಅವರ ವಿರುದ್ಧ ದಂಗೆಯ ಆರೋಪ ಹೊರಿಸಲಾಗಿದೆ.  ಕಿಂಗ್ ಸಲ್ಮಾನ್​ನ ಸಹೋದರ ರಾಜಕುಮಾರ ಅಹ್ಮದ್ ಬಿನ್ ಅಬ್ದುಲ್  ಅಲ್ ಸೌದ್​ ಮತ್ತು ಸೋದರಳಿಯ ಮೊಹ್ಮದ್ ಬಿನ್ ನಯಫ್​ರನ್ನು ರಾಜದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ.

ಇವರಿಬ್ಬರ ವಿರುದ್ಧ ಸೌದಿಯ ರಾಜ ಸಲ್ಮಾನ್ ಮತ್ತು ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಅವರ ವಿರುದ್ಧ ಷಡ್ಯಂತ್ರ ರಚಿಸಿರುವ ಆರೋಪ ಹೊರಿಸಲಾಗಿದೆ. ಇವರಿಬ್ಬರ ಜೊತೆಗೆ ರಾಜಕುಮಾರ ನಯಫ್​ನ ಕಿರಿಯ ಸಹೋದರ ಪ್ರಿನ್ಸ್ ನವಫ್​ರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇವರ ಮೇಲಿರುವ ಆರೋಪ ಸಾಬೀತಾದಲ್ಲಿ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಈ ಮೂಲಕ ಮೊಹ್ಮದ್ ಬಿನ್ ಸಲ್ಮಾನ್ ಸೌದಿ ಅಧಿಕಾರದ ಗಾದಿ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಲಗೊಳಿಸುತ್ತಿದ್ದಾರೆ ಅನ್ನೋದು ಸಾಬೀತಾಗಿದೆ.

masthmagaa.com:

Contact Us for Advertisement

Leave a Reply