ಸೌದಿ ಆರೇಬಿಯಾದಲ್ಲಿ ನಿಗೂಢ ಬಂಡೆ! ಏನಿದರ ರಹಸ್ಯ..?

masthmagaa.com:

ಭೂಮಿ ಮೇಲೆ ಉತ್ತರವೇ ಸಿಗದ ಹಲವಾರು ಪ್ರಶ್ನೆಗಳಿವೆ. ಅಂತಹ ವಿಚಾರಗಳಲ್ಲಿ ಹೆಚ್ಚಿನವರ ಗಮನ ಹೋಗೋದು ಏಲಿಯನ್​ಗಳತ್ತ.. ಅಂತಹ ವಿಚಿತ್ರಗಳಲ್ಲಿ ಸೌದಿ ಅರೇಬಿಯಾದಲ್ಲಿರೋ ಈ ಕಲ್ಲು ಕೂಡ ಒಂದಾಗಿದೆ. ಬೃಹತ್ ಕಲ್ಲುಬಂಡೆ ಇದಾಗಿದ್ದು, ಇದ್ರಲ್ಲಿ ಲೇಸರ್​ನಿಂದ ಕತ್ತರಿಸಿದಂತೆ ಮಧ್ಯಕ್ಕೆ ನೇರವಾಗಿ ಕಟ್ ಮಾಡಲಾಗಿದೆ. ಆದ್ರೆ ಇದನ್ನ ಹೇಗೆ ಮಾಡಿರಬಹುದು ಅನ್ನೋದಕ್ಕೆ ಉತ್ತರವಿಲ್ಲ. ಕೆಲವರಂತೂ ಇದು ಮನುಷ್ಯರಿಂದ ಮಾಡಿರೋಕೆ ಸಾಧ್ಯವೇ ಇಲ್ಲ. ಇದನ್ನ ಏಲಿಯನ್​ಗಳು ಮಾಡಿದ್ದು ಅಂತ ಹೇಳ್ತಾರೆ. ಇನ್ನು ಕೆಲವರು ಇದು ಹಿಂದಿನ ಕಾಲದಲ್ಲಿ ಮಾಡಲಾಗಿದೆ. ಈ ಮೂಲಕ ಆಗಿನ ಕಾಲದಲ್ಲಿ ತಂತ್ರಜ್ಞಾನ ಎಷ್ಟರಮಟ್ಟಿಗೆ ಮುಂದುವರಿದಿತ್ತು ಅನ್ನೋದನ್ನ ಅರ್ಥ ಮಾಡಿಕೊಳ್ಬೋದು ಅಂತ ವಾದಿಸ್ತಾರೆ. ಈಜಿಪ್ಟ್​ನಲ್ಲಿ ಪಿರಮಿಡ್ ಹೇಗೆ ನಿರ್ಮಿಸಲಾಯ್ತೋ ಅದೇ ರೀತಿ ಈ ಕಲ್ಲನ್ನು ರಚಿಸಿರಬಹುದು ಅನ್ನೋ ವಾದ ಕೂಡ ಇದೆ. ಇದು ಸುಮಾರು 9 ಮೀಟರ್ ಎತ್ತರವಿದ್ದು, 7.6 ಮೀಟರ್ ಅಗಲವಿದೆ. ಇದ್ರ ಮೇಲೆ ಕೆಲವೊಂದು ಆಕೃತಿಗಳನ್ನು ಕೂಡ ಕೆತ್ತಲಾಗಿದ್ದು, ಒಂದು ಕುದುರೆ ಮತ್ತು ಮನುಷ್ಯನ ರಚನೆ ಕೂಡ ಇದೆ. ಇದೊಂದು ಫೇಮಸ್ ಪ್ರವಾಸಿಸ್ಥಳವಾಗಿದ್ದು, ದೂರದ ಪ್ರದೇಶಗಳಿಂದ ಇಲ್ಲಿಗೆ ಬರೋ ಜನ ಫೋಟೋ ತೆಗೆಸಿಕೊಳ್ತಾರೆ.

-masthmagaa.com

Contact Us for Advertisement

Leave a Reply