ರಂಜಾನ್ ಹಿನ್ನೆಲೆ ಸೌದಿಯಲ್ಲಿ 24 ಗಂಟೆಗಳ ಕರ್ಫ್ಯೂ ಸಡಿಲಿಕೆ..!

masthmagaa.com:

ಕೊರೋನಾ ವೈರಸ್ ಹರಡುವುದನ್ನ ತಡೆಯಲು ಹೇರಿದ್ದ ನಿರ್ಬಂಧಗಳನ್ನ ನಿಧಾನವಾಗಿ ಸಡಿಲಗೊಳಿಸುತ್ತಿರುವ ರಾಷ್ಟ್ರಗಳ ಪಟ್ಟಿಗೆ ಈಗ ಸೌದಿ ಅರೇಬಿಯಾ ಕೂಡ ಸೇರಿದೆ. ಸೌದಿಯಲ್ಲಿ ಜಾರಿ ಮಾಡಿದ್ದ 24×7 ಕರ್ಫ್ಯೂವನ್ನು ಏಪ್ರಿಲ್ 26ರಿಂದ ಮೇ 13ರವರೆಗೆ ಭಾಗಶಃ ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದೆ. ಆದ್ರೆ ಮುಸ್ಲಿಮರ ಪವಿತ್ರ ಸ್ಥಳವಾದ ಮೆಕ್ಕಾ ಸೇರಿದಂತೆ ಕೆಲ ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ.

ಹೊಸ ಆದೇಶದ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿಯಲ್ಲಿರಲಿದೆ. ಜೊತೆಗೆ ಸಗಟು & ಚಿಲ್ಲರೆ ಅಂಗಡಿಗಳಲ್ಲಿ ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಆದ್ರೆ ಬ್ಯೂಟಿ ಪಾರ್ಲರ್, ಸಲೂನ್, ಸ್ಪೋರ್ಟ್ಸ್​ ಕ್ಲಬ್‌, ಜಿಮ್, ಮನರಂಜನಾ ಕೇಂದ್ರ, ಚಿತ್ರಮಂದಿರ, ರೆಸ್ಟೋರೆಂಟ್‌, ಕೆಫೆ ಮುಂತಾದವುಗಳಿಗೆ ಯಾವುದೇ ವಿನಾಯಿತಿ ನೀಡಿಲ್ಲ.

ಸುನ್ನಿ ಮುಸ್ಲಿಮರು ಹೆಚ್ಚಾಗಿರುವ ಸೌದಿಯಲ್ಲಿ ಇದುವರೆಗೆ 16,000ಕ್ಕೂ ಹೆಚ್ಚು ಜನರಿಗೆ ಕಾಯಿಲೆ ಹರಡಿದೆ. ಈ ಪೈಕಿ 136 ಮಂದಿ ಪ್ರಾಣ ಕಳೆದುಕೊಂಡಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನ ಗುಣಮುಖರಾಗಿದ್ದಾರೆ.

-masthmagaa.com

Contact Us for Advertisement

Leave a Reply