ಈಗ ಹಾಕಿರೋ ಲಸಿಕೆಗೆ ಒಮೈಕ್ರಾನ್ ತಡೆಯೋ ತಾಕತ್ತು ಇದ್ಯಾ..?

masthmagaa.com:

ಒಮೈಕ್ರಾನ್​ ವಿರುದ್ಧ ನಾವು ಈಗಾಗಲೇ ಹಾಕಿಸಿಕೊಂಡಿರೋ ಕೊರೋನಾ ಲಸಿಕೆ ವರ್ಕೌಟ್​ ಆಗದಿದ್ರೂ, ಗಂಭೀರ ಪ್ರಮಾಣದಲ್ಲಿ ನಮ್ಗೆ ಸಮಸ್ಯೆ ಆಗೋದನ್ನ ಮತ್ತು ಕೊರೋನಾದಿಂದಾಗುವ ಸಾವನ್ನ ಲಸಿಕೆ ತಡೆಯುತ್ತೆ ಅಂತ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಲಸಿಕೆ ಅಭಿಯಾನದಲ್ಲಿ ಯಾವ ದೇಶ ಫಸ್ಟ್ ಯಾವ ದೇಶ ಲಾಸ್ಟ್ ಅಂತ ಒಂದ್ಸರಿ ನೋಡಣ. ಇದು ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿಯಾದ ಎಎಫ್​ಪಿಯ ಅಂಕಿ ಅಂಶ. ಇದರ ಪ್ರಕಾರ, ವ್ಯಾಕ್ಸಿನೇಷನ್​ ವಿಚಾರದಲ್ಲಿ ಯುಎಇ ಮೊದಲ ಸ್ಥಾನದಲ್ಲಿದೆ. ಅದು ತನ್ನ ಜನಸಂಖ್ಯೆಯ 90 ಪರ್ಸೆಂಟ್​​​ ಜನರಿಗೆ ಲಸಿಕೆ ಹಾಕಿದೆ. ನಂತ್ರದ ಸ್ಥಾನದಲ್ಲಿ ಪೂರ್ಚುಗಲ್​ 87 ಪರ್ಸೆಂಟ್​, ಸಿಂಗಾಪುರ್​ 86​, ಕತಾರ್​ 85​, ಚಿಲಿ ಮತ್ತು ಮಾಲ್ಟಾ 84, ಕ್ಯೂಬಾ 81 ಪರ್ಸೆಂಟ್​, ದಕ್ಷಿಣ ಕೊರಿಯಾ ಮತ್ತು ಕಾಂಬೋಡಿಯಾ 80 ಪರ್ಸೆಂಟ್​​ ಜನರಿಗೆ ಕೊರೋನಾ ಲಸಿಕೆ ಹಾಕಿ ಈ ಲಿಸ್ಟ್​ನಲ್ಲಿ ಟಾಪ್​​ನಲ್ಲಿವೆ. ಇನ್ನು ಆರಂಭದಲ್ಲಿ ಲಸಿಕೆ ಅಭಿಯಾನದಲ್ಲಿ ಒಳ್ಳೇ ಸಾಧನೆ ಮಾಡಿದಗದ ಬ್ರಿಟನ್​ 68 ಪರ್ಸೆಂಟ್​, ಇಸ್ರೇಲ್​ 67 ಮತ್ತು ಅಮೆರಿಕ 60 ಪರ್ಸೆಂಟ್​ ಜನರಿಗೆ ಲಸಿಕೆ ಹಾಕಿದೆ. ಈ ಲಿಸ್ಟ್​ನ ಕೊನೇ ಸ್ಥಾನದಲ್ಲಿ ಬುರುಂಡಿ ಮತ್ತು ಡೆಮಾಕ್ರೆಟಿಕ್​ ರಿಪಬ್ಲಿಕ್​ ಆಫ್​​ ಕಾಂಗೋ ಇವೆ. ಈ ದೇಶಗಳಲ್ಲಿ 0.1 ಪರ್ಸೆಂಟ್​​ಗೂ ಕಮ್ಮಿ ಜನರಿಗೆ ಲಸಿಕೆ ಹಾಕಲಾಗಿದೆ. ಇನ್ನು ಆಫ್ರಿಕಾ ಖಂಡದ ಎರಿಟ್ರಿಯಾ ಮತ್ತು ಏಷ್ಯಾ ಖಂಡದಲ್ಲಿ ಬರೋ ಉತ್ತರ ಕೊರಿಯಾ ಇದುವರೆಗೆ ಲಸಿಕೆ ಅಭಿಯಾನವನ್ನೇ ಶುರು ಮಾಡಿಲ್ಲ. ಕಿಮ್​ ಜಾಂಗ್​ ಉನ್​ರ ಉತ್ತರ ಕೊರಿಯಾ ಅಂತೂ ಇದುವರೆಗೆ ಒಂದೇ ಒಂದು ಕೊರೋನಾ ಕೇಸ್​ ವರದಿಯಾಗಿಲ್ಲ ಅಂತ ಹೇಳ್ತಿದೆ. ಅತ್ತ ಎರಿಟ್ರಿಯಾ ಲೆಕ್ಕದ ಪ್ರಕಾರ ಆ ದೇಶದಲ್ಲಿ ಇದುವರೆಗೆ ಸುಮಾರು ಏಳು ಸಾವಿರ ಜನರಿಗೆ ಕೊರೋನಾ ದೃಢಪಟ್ಟಿದೆ, 60 ಸಾವು ಸಂಭವಿಸಿದೆ.

-masthmagaa.com

Contact Us for Advertisement

Leave a Reply