ದಾಂಪತ್ಯ ಜೀವನಕ್ಕೆ ಕಾಲಿಟ್ಟ “ಸೀರುಂಡೆ ರಘು”

masthmagaa.com:

ಸತ್ಯ ಧಾರವಾಹಿಯ ಮೂಲಕ ಚಿರಪರಿಚಿತರಾಗಿದ್ದ ಸೀರುಂಡೆ ರಘು ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ರಂಜಿತಾ ಎಂಬುವವರ ಜೊತೆ ಸರಳವಾಗಿ ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಸೀಸನ್ 2′ ಮತ್ತು `ಸತ್ಯ’ ಸೀರಿಯಲ್ ಹೀರೋ ಕಾರ್ತಿಕ್ ಮೈದುನನ ಪಾತ್ರದಲ್ಲಿ ರಘು ಪರಿಚಿತರಾಗಿದ್ದಾರೆ. ಕಿರುತೆರೆಯಲ್ಲಿ ಪ್ರೇಕ್ಷಕರಿಗೆ ನಕ್ಕು ನಗಿಸುವ ಮೂಲಕ ಸೀರುಂಡೆ ರಘು ಫೇಮಸ್‌ ಆಗಿದ್ರು. ಇದೀಗ ಇವರು ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿಗಳು, ಕಿರುತೆರೆ ನಟ-ನಟಿಯರು ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭಹಾರೈಸಿದ್ದಾರೆ. ಅಭಿಮಾನಿಗಳು ಕೂಡ ರಘು ದಂಪತಿಗೆ ಶುಭಕೋರಿದ್ದಾರೆ.

-masthmagaa.com

Contact Us for Advertisement

Leave a Reply