ರಸ್ತೆ ಗುಂಡಿ ಸಮಸ್ಯೆಗೆ NHAIನಿಂದ ಹೊಸ ಪರಿಹಾರ!

masthmagaa.com:

ಭಾರತದ ರಸ್ತೆಗಳ ಪರಮಶತ್ರು, ರಸ್ತೆ ಗುಂಡಿ ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಅಥ್ವಾ NHAI ಹೊಸ ಪರಿಹಾರ ಹುಡುಕಿದೆ. ತಂತಾನೇ ರಿಪೇರಿ ಆಗೋ ಸೆಲ್ಫ್‌ ಹೀಲಿಂಗ್‌ ವಸ್ತುಗಳನ್ನ.. ಉಕ್ಕಿನ ನಾರು ಹಾಗೂ ಬಿಟ್ಯುಮಿನ್‌ಗಳನ್ನ ರಸ್ತೆ ನಿರ್ಮಾಣದಲ್ಲಿ ಬಳಸೋಕೆ ಚಿಂತಿಸಿದೆ. ಇದ್ರಿಂದ ರಸ್ತೆಯಲ್ಲಿ ಹೊಸದಾಗಿ ಗುಂಡಿಯಾದ್ರೆ, ಈ ಬಿಟ್ಯುಮಿನ್‌ನಿಂದಾಗಿ ಡಾಂಬರು ಉಬ್ಬಿ.. ಎಕ್ಸ್‌ಪ್ಯಾಂಡ್‌ ಆಗಿ ಗುಂಡಿಯನ್ನ ತಂತಾನೇ ಮುಚ್ಚುತ್ತೆ ಎನ್ನಲಾಗಿದೆ. ಸದ್ಯ ಕೆಲವು ಹೈವೇಗಳಲ್ಲಿ ಪರಿಕ್ಷಾರ್ಥವಾಗಿ ಈ ವಸ್ತುವನ್ನ ಬಳಸೋಕೆ NHAI ಚಿಂತಿಸಿದೆ. ಅಂದ್ಹಾಗೆ ಈ ಸ್ವಯಂ-ಗುಣಪಡಿಸಿಕೊಳ್ಳೋ ಡಾಂಬರನ್ನ ನೆದರ್‌ಲೆಂಡ್‌, ಬ್ರಿಟನ್‌ ಸೇರಿ ಹಲವು ದೇಶಗಳ ರಸ್ತೆಗಳಲ್ಲಿ ಬಳಸಲಾಗ್ತಿದೆ.

-masthmagaa.com

Contact Us for Advertisement

Leave a Reply