ಮಹಿಳೆಗೆ 143 ಮಂದಿಯಿಂದ ಲೈಂಗಿಕ ಕಿರುಕುಳ..?

masthmagaa.com:

ಹೈದ್ರಾಬಾದ್: ಮಹಿಳೆಯೊಬ್ಬರು ತನಗೆ 143 ಮಂದಿ ಲೈಂಗಿಕ ಕಿರುಕುಳ ನೀಡಿದ್ದಾರೆ ಅಂತ ಆರೋಪಿಸಿದ್ಧಾರೆ. ಹೈದ್ರಾಬಾದ್ ಮೂಲದ 25 ವರ್ಷದ ಮಹಿಳೆ ಈ ಬಗ್ಗೆ ಪುಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು 42 ಪುಟಗಳ ಎಫ್​ಐಆರ್ ದಾಖಲಿಸಿದ್ದಾರೆ. ಇದ್ರಲ್ಲಿ 41 ಪುಟಗಳಲ್ಲಿ ಮಹಿಳೆ ಆರೋಪಿಸಿರುವ 143 ಮಂದಿಯ ಮಾಹಿತಿ ಇದೆ. ಇವರ ಪೈಕಿ ರಾಜಕೀಯ ಹಿನ್ನೆಲೆಯುಳ್ಳವರು, ವಿದ್ಯಾರ್ಥಿ ಸಂಘಟನೆಗಳ ನಾಯಕರು, ಮಾಧ್ಯಮ, ಸಿನಿಮಾ ಮತ್ತು ಇತರೆ ಕ್ಷೇತ್ರದವರು ಸೇರಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಮಹಿಳೆಯನ್ನು ಮೆಡಿಕಲ್ ಟೆಸ್ಟ್​​​​ಗೆ ಕಳುಹಿಸಿದ್ದಾರೆ. ಜೊತೆಗೆ ಮಹಿಳೆ ಆರೋಪಿಸಿರುವ 143 ಮಂದಿಯನ್ನೂ ಪ್ರತ್ಯೇಕವಾಗಿ ಕರೆಸಿ ವಿಚಾರಣೆ ನಡೆಸಲು ನಿರ್ಧರಿಸಿದ್ಧಾರೆ. ತನ್ನ ಪತಿ ನನಗೆ ಡಿವೋರ್ಸ್​ ನೀಡಿದ್ದು, ಅದಕ್ಕೂ ಮುನ್ನ ಪತಿಯ ಕುಟುಂಬದವರಿಂದಲೂ ನನಗೆ ಲೈಂಗಿಕ ಕಿರುಕುಳ ಆಗಿದೆ ಅಂತ ದೂರಿನಲ್ಲಿ ಉಲ್ಲೇಖಿಸಿದ್ಧಾರೆ.

-masthmagaa.com

Contact Us for Advertisement

Leave a Reply