ಮದುವೆ ಆದ್ಮೇಲೆ ಶಾರುಖ್‌ ಖಾನ್‌ – ಗೌರಿ ಎದುರಿಸಿದ ಕಷ್ಟದ ದಿನಗಳು!

masthmagaa.com:

ನಟ ಶಾರುಖ್‌ ಖಾನ್‌ ಮತ್ತು ಅವರ ಪತ್ನಿ ಗೌರಿ ಖಾನ್‌ ಮದುವೆ ಆಗುವಂತ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿದ್ರು. ಮೊದಲು ಗೌರಿ ಖಾನ್‌, ಶಾರುಖ್‌ ಖಾನ್‌ ಅವರನ್ನ ಇಷ್ಟ ಪಟ್ಟಿರಲಿಲ್ಲ, ನಂತರ ಗೌರಿ ಅವರ ಫ್ಯಾಮಿಲಿ ಕೂಡ ಶಾರುಖ್‌ ಖಾನ್‌ ಅವರನ್ನ ಇಷ್ಟ ಪಟ್ಟಿರಲಿಲ್ಲ. ಅಲ್ಲದೇ ಕೆಲವು ಧಾರ್ಮಿಕ ಸಂಸ್ಥೆಗಳು ಸಹ ಇವರ ಮದುವೆಯನ್ನ ವಿರೋಧ ಮಾಡಿತ್ತು. ಈ ಹಿಂದಿನ ಸಂದರ್ಶನದಲ್ಲಿ ಮಾತನಾಡಿದ ಶಾರುಖ್‌ ಖಾನ್‌ ಗೌರಿ ಅವರ ತಂದೆ ತಾಯಿಯ ಸ್ಥಾನದಲ್ಲಿ ನಾನು ಇದ್ದಿದ್ರೆ ಗೌರಿ ಅವರಿಗೆ ಮದುವೆ ಆಗೋಕೆ ಕೊಡ್ತಾ ಇರಲಿಲ್ಲ ಅಂತ ಹೇಳಿದ್ದಾರೆ.

“ನಾನು ಈಗ ಸೂಟ್‌ ಹಾಕ್ತೀನಿ, ಹೇರ್‌ ಸ್ಟೈಲ್‌ ಮಾಡ್ತೀನಿ, ಮತ್ತೆ ಹೀರೋ ಆಗಿದ್ದೀನಿ. ಆದ್ರೆ ಗೌರಿ ಅವರನ್ನ ಮದುವೆ ಆಗುವಂತ ಟೈಮ್‌ನಲ್ಲಿ ನನಗೆ ಹೀರೋ ಆಗಬೇಕು ಅನ್ನೋ ಆಸೆ ಇತ್ತು, ಅದ್ರಲ್ಲೂ ನಾನು ಬೇರೆ ಧರ್ಮದವ್ನು. ನನಗೇನಾದ್ರು ಮಗಳಿದ್ದು ಅವಳು ಇಷ್ಟ ಪಡ್ತಾ ಇದ್ದಂತ ಹುಡುಗ ನನ್ನ ರೀತಿ ಇದ್ದಿದ್ರೆ ನಾನು ಅವನನ್ನ ಒಪ್ಪಿಕೋಳ್ತಾ ಇರಲಿಲ್ಲ. ನಾನೇ ಮನೆಯಿಂದ ಆಚೆ ಕಳಿಸುವ ಮೊದಲು ನೀನೇ ಹೊರಟು ಹೋಗು ಅಂತ ಹೇಳ್ತಿದ್ದೆ. ಗೌರಿ ಅವರ ತಂದೆ ತಾಯಿ ಕೂಡ ಮೊದಲು ನನ್ನನ್ನ ಒಪ್ಪದೇ ಇರೋದು ಸರಿ ಇದೆ. ಅಮೇಲೆ ಅವರು ನನಗೆ ಮದುವೆ ಆಗೋಕೆ ಒಪ್ಪಿಗೆ ಕೊಟ್ರು. ನಮ್ಮ ಪರಿಸ್ಥಿತಿ ಹೇಗಿತ್ತು ಅಂದ್ರೆ ಯಾರಿಗೂ ಗೊತ್ತಿಲ್ದೆ ಇದ್ದ ಹಾಗೇ ಮದುವೆ ಆಗಬೇಕಿತ್ತು, ಆದ್ರೂ ಒಂದಿಷ್ಟು ಜನರಿಗೆ ನಮ್ಮ ಮದುವೆ ಬಗ್ಗೆ ಗೊತ್ತಾಗಿ ಮನೆ ಹತ್ರ ಬಂದು ಗಲಾಟೆ ಕೂಡ ಮಾಡಿದ್ರು. ನನ್ನ ಮದುವೆ ಟೈಮ್‌ನಲ್ಲಿ ನನ್ನ ಹೆಸರಲ್ಲಿ ಮನೆ ಇರಲಿಲ್ಲ, ಹಾಗಾಗಿ ನನ್ನ ಫ್ರೆಂಡ್‌ ಮನೆಯ ಅಡ್ರೆಸ್‌ ಅನ್ನ ಕೋರ್ಟ್‌ಗೆ ಕೊಟ್ಟಿದ್ದೆ. ಮನೆಗೆಲ್ಲಾ ಕಲ್ಲನ್ನ ಎಸೆದಿದ್ರು, ನನ್ನ ಫ್ರೆಂಡ್‌ ನನಗೆ ಕಾಲ್‌ ಮಾಡಿ ಮನೆ ಮೇಲೆ ಕಲ್ಲನ್ನ ಎಸಿತಾ ಇದ್ದಾರೆ ಅಂತ ಹೇಳ್ತಿದ್ದ. ಹಾಗಾಗಿ ನಮ್ಮ ಮದುವೆಯನ್ನ ಮುಚ್ಚಿಟ್ಟು ಮಾಡಬೇಕಾಗಿ ಬಂದಿತ್ತು” ಅಂತ ಹೇಳಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಅಕ್ಟೋಬರ್ 25, 1991 ರಂದು ಮದುವೆ ಆದ್ರು. ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ.

-masthmagaa.com

Contact Us for Advertisement

Leave a Reply