OTT ಯಲ್ಲಿ ಬಿಡುಗಡೆಯಾದ ಶಾಹಿದ್‌ ಅಭಿನಯದ ಸಿನಿಮಾ : ಬಾಲಿವುಡ್‌ ನಶಿಸಿ ಹೋಗತ್ತೆ ಎಂದ ವಿವೇಕ್‌ ಅಗ್ನಿಹೋತ್ರಿ!

masthmagaa.com:

ಈ ಹಿಂದೆ ಬಾಲಿವುಡ್‌ ನಿರ್ದೆಶಕ ವಿವೇಕ್‌ ಅಗ್ನಿಹೋತ್ರಿ ಅವರು ಹಿಂದಿ ಚಿತ್ರರಂಗ ನಶಿಸಿ ಹೋಗೋಕೆ ಕಾರಣ ಏನೇನು ಅಂತ ತಿಳಿಸಿದ್ರು. ಈಗ ಶಾಹಿದ್‌ ಕಪೂರ್‌ ಅಭಿನಯದ ಬ್ಲಡಿ ಡ್ಯಾಡಿ ಚಿತ್ರ OTTಯಲ್ಲಿ ರಿಲೀಸ್‌ ಆಗೋದ್ರಿಂದ ಕೂಡ ಬಾಲಿವುಡ್‌ ನಾಶ ಆಗತ್ತೆ ಹೇಳಿದ್ದಾರೆ.

ಬ್ಲಡಿ ಡ್ಯಾಡಿ ಚಿತ್ರ ಜಿಯೋ ಸಿನಿಮಾದಲ್ಲಿ ಇಂದು ( ಜೂನ್‌ 9) ರಿಲೀಸ್‌ ಆಗಿದೆ. ಈ ಚಿತ್ರದ ಬುಡುಗಡೆಯ ಕುರಿತು ಜಾಹಿರಾತಿನ ಫೋಟೋವನ್ನ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಶೇರ್‌ ಮಾಡಿ “ಯಾರಾದ್ರೂ ಯಾಕೆ 200 ಕೋಟಿ ಬಜೆಟ್‌ ಸಿನಿಮಾವನ್ನ OTTಯಲ್ಲಿ ಫ್ರೀ ಆಗಿ ನೋಡೋಕೆ ಕೋಡ್ತಾರೆ? ಇದೆಲ್ಲಾ ಹುಚ್ಚು ತನದ ವ್ಯಾಪರದ ದಾರಿ ಇದೇನಾ ? . ದುಃಖದ ಸುದ್ದಿ ಅಂದ್ರೆ ಬಾಲಿವುಡ್‌ ನಾಶ ಆಗ್ತಾ ಇರೋದನ್ನ ಸೆಲಬ್ರೇಟ್‌ ಮಾಡ್ತಾ ಇದೀವಿ.” ಅಂತ ಬರೆದುಕೊಂಡಿದ್ದಾರೆ.

ಇನ್ನು ವಿವೇಕ್‌ ಅಗ್ನಿಹೋತ್ರಿ ಅವರ ಈ ಟ್ವೀಟ್‌ಗೆ ಹಲವರು ಉತ್ತರ ಕೊಡ್ತಾ ಇದಾರೆ. ” ಇದು ಜಿಯೋ ಸಿನಿಮಾದ ವ್ಯಾಪಾರ ಬುದ್ದಿ. ಗ್ರಾಹಕರು ಜಾಸ್ತಿ ಆಗೋ ತನಕ ಮಾತ್ರ ಎಲ್ಲವನ್ನೂ ಫ್ರೀ ಕೊಡ್ತಾರೆ. ಆಮೇಲೆ ಒಂದೇ ಸಹ ಚಾರ್ಜಸ್‌ ಹಾಕ್ತಾರೆ.” ಅಂತ ಕಾಮೆಂಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply