100 ಅಡಿ ಎತ್ತರದಿಂದ ಬಿದ್ದು ಕಾಲು ಮುರಿದುಕೊಂಡ ಶಕ್ತಿಮಾನ್‌

masthmagaa.com:

ಭೀಷ್ಮ ಪಿತಾಮಹ ಮತ್ತು ಶಕ್ತಿಮಾನ್‌ನಂತಹ ಅಪ್ರತಿಮ ಪಾತ್ರಗಳನ್ನು ನಿರ್ವಹಿಸಿದ ನಟ ಮುಖೇಶ್ ಖನ್ನಾ ಅವರು ಒಮ್ಮೆ ಸೆಟ್‌ನಲ್ಲಿ ಸಾಹಸ ಪ್ರದರ್ಶನ ಮಾಡುವಾಗ 100 ಅಡಿಯಿಂದ ಬಿದ್ದಿದ್ದಾರೆ ಎಂಬುದನ್ನ ಖ್ಯಾತ ಕೋರಿಯೋಗ್ರಾಫರ್‌ ಮತ್ತು ಸ್ಟಂಟ್‌ ಡೈರೆಕ್ಟರ್‌ ಶ್ಯಾಮ್‌ ಕೌಶಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಮುಖೇಶ್‌ ಖನ್ನಾ ಮನರಂಜನಾ ಕ್ಷೇತ್ರದಲ್ಲಿ ಜನಪ್ರಿಯ ನಟ. ರೂಹಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಕಿರುತೆರೆಯ ಹಿಟ್ ಸಿರೀಯಲ್‌ ಮಹಾಭಾರತದಲ್ಲೂ ಕೂಡ ಭೀಷ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇವರಿಗೆ ಬಿಗ್‌ ಬ್ರೇಕ್‌ ಕೊಟ್ಟಿದ್ದು ಭಾರತದ ಮೊದಲ ಸೂಪರ್ ಹೀರೋ ಧಾರಾವಾಹಿ, ಶಕ್ತಿಮಾನ್. ಇವರು ಶಕ್ತಿಮಾನ್‌ನಲ್ಲಿ ದ್ವಿಪಾತ್ರವನ್ನು ನಿಭಾಯಿಸಿದ್ದರು. ಒಂದು ಮುಗ್ಧ ಗಂಗಾಧರ್ ಮತ್ತು ಸೂಪರ್ ಹೀರೋ ಶಕ್ತಿಮಾನ್ ಪಾತ್ರಗಳನ್ನು ನಿರ್ವಹಿಸಿದ್ದರು. 1990 ರ ದಶಕದಲ್ಲಿ, ಶಕ್ತಿಮಾನ್ ಎಷ್ಟು ಫೇಮಸ್‌ ಆಗಿತ್ತು ಅಂದ್ರೆ ಜನರು ಅವರ ಸಾಹಸಗಳನ್ನು ಇಮಿಟೇಟ್‌ ಮಾಡೋಕೆ ಶುರು ಮಾಡಿದ್ದರು. ಜನರು ಕೆಲವು ಸೀನ್‌ಗಳನ್ನ ಇಮಿಟೇಟ್‌ ಮಾಡುವಾಗ ಹಲವಾರು ಅಪಘಾತಗಳು ಸಂಭವಿಸಿದ್ದವು. ನಂತರ ಈ ಸಾಹಸಗಳನ್ನ ಅನುಕರಿಸದಂತೆ ಜನರಿಗೆ ಸಲಹೆ ನೀಡಲಾಯಿತು. ಇದೇ ರೀತಿಯ ಒಂದು ಆಡ್‌ ಶೂಟಿಂಗ್‌ ವೇಳೆ ಆದಂತ ಅವಘಡದ ಬಗ್ಗೆ ಸ್ಟಂಟ್‌ ಡೈರೆಕ್ಟರ್‌ ಶ್ಯಾಮ್‌ ಹೇಳಿದ್ದಾರೆ.

ಶ್ಯಾಮ್‌ ಅವರ ಕೋರಿಯೋಗ್ರಾಫಿಯ ಆಡ್‌ ಶೂಟಿಂಗ್‌ ಸಮಯದಲ್ಲಿ ಸಾಹಸ ಪ್ರದರ್ಶನ ಮಾಡುವಾಗ ಆದ ಘಟನೆ ಬಗ್ಗೆ ವಿವರಿಸಿದ್ದಾರೆ . “ಅಡ್ವಟೈಸಮೆಂಟ್‌ನಲ್ಲಿ, ಮುಖೇಶ್ ಆಕಾಶದಲ್ಲಿ ಸುಮಾರು 100 ಅಡಿ ಎತ್ತರದ ಕ್ರೇನ್‌ನಲ್ಲಿದ್ದರು. ಮುಖೇಶ್‌ ಹಾರುತ್ತಿರುವುದನ್ನು ತೋರಿಸಬೇಕು ಮತ್ತು ನಂತರ ನೆಲದ ಮೇಲೆ ಇಳಿಯಬೇಕು ಎಂಬ ರೀತಿಯಲ್ಲಿ ದೃಶ್ಯವನ್ನು ಕೋರಿಯೋಗ್ರಾಫ್‌ ಮಾಡಲಾಗಿತ್ತು. ಅವರ ಸುತ್ತಲೂ ತಂತಿಗಳಿತ್ತು, ಮತ್ತು ಅವರನ್ನು ಹಿಡಿದುಕೊಳ್ಳಲು ಮತ್ತು ಲ್ಯಾಂಡಿಂಗ್ ಮಾಡಲು ನೆಲದ ಮೇಲೆ ಜನರಿದ್ದರು. ಆದರೆ ಅವರು ಮೇಲಿಂದ ಕೆಳಗೆ ಬರುವಾಗ ಮಧ್ಯದಲ್ಲಿ ಬ್ಯಾಲೆನ್ಸ್‌ ಕಳೆದುಕೊಂಡು, ನೆಲಕ್ಕೆ ಬಿದ್ದರು. ಇದರಿಂದ ಮುಖೇಶ್‌ ಅವರ ಕಾಲು ಮುರಿದಿತ್ತು. ಹಲವಾರು ವಾರಗಳ ತನಕ ವೀಲ್‌ ಚೇರ್‌ ಮೇಲೆ ಇರಬೇಕಾಯಿತು” ಅಂತ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply