ಚೀನಾದಲ್ಲಿ ಕೊರೊನಾ ಅಬ್ಬರ, ಶಾಂಗೈನಲ್ಲಿ ಲಾಕ್‌ ಡೌನ್‌ ಮುಂದುವರೆಕೆ

masthmagaa.com:

ಜಗತ್ತಿಗೆಲ್ಲಾ ವೈರಸ್‌ ಹರಿಬಿಟ್ಟು ತಾನು ಮಾತ್ರ ಫುಲ್‌ ಫ್ರೀ ಆಗಿದ್ದ ಚೀನಾಗೆ ಕೊರೊನಾ ಅಂದ್ರೆ ಏನು ಅನ್ನೋದು ಈಗ ಅರ್ಥ ಆಗಿರೋ ಥರಾ ಕಾಣಿಸ್ತಿದೆ. ಯಾಕಂದ್ರೆ ಕಳೆದ ಕೆಲವಾರಗಳ ಹಿಂದೆಯಷ್ಟೇ ಅಲ್ಲೊಂದು ಇಲ್ಲೊಂದು ಅಂತ ಕಾಣಿಸಿಕೊಳ್ತಿದ್ದಕೋವಿಡ್‌ ವೈರಸ್‌ ಈಗ ಭಾರಿಪ್ರಮಾಣದಲ್ಲಿ ಪತ್ತೆಯಾಗ್ತಿದೆ. ಅದರಲ್ಲೂ ಎರಡೂವರೆ ಕೋಟಿ ಜನಸಂಖ್ಯೆ ಇರುವ ಚೀನಾದ ಎಕಾನಾಮಿಕ್‌ ಹಬ್‌, ಆರ್ಥಿಕ ರಾಜಧಾನಿ ಶಾಂಗೈನಲ್ಲಿ ಕೊರೊನಾ ಆರ್ಭಟ ಫುಲ್‌ ಜೋರಾಗಿದೆ.ನಿನ್ನೆ ಒಂದೇ ದಿನ ಸುಮಾರು 13,000 ಕ್ಕೂ ಹೆಚ್ಚು ಪ್ರಕರಣಗಳು ಶಾಂಗೈನಲ್ಲೇ ವರದಿಯಾಗಿದೆ ಅಂತ ಅಲ್ಲಿನ ಸಿಟಿ ಗೌರ್ನಮೆಂಟ್‌ ಮಾಹಿತಿ ನೀಡಿದೆ. ಈ ಬಗ್ಗೆ ತನ್ನ ಅಧಿಕೃತ ವೀಚಾಟ್‌ ಅಕೌಂಟ್‌ನಲ್ಲಿ ವರದಿ ಪ್ರಕಟಿಸಿದೆ. ಅಲ್ದೇ ಈಗಿರುವ ಲಾಕ್ಢೌನ್‌ ಜೊತೆಗೆ ಕೆಲ ಕಠಿಣ ನಿಯಮಗಳನ್ನ ಸೇರಿಸಲಾಗಿದ್ದು ಮುಂದಿನ ಆದೇಶದವರೆಗೂ ಶಾಂಗೈ ಬಂದ್‌ ಆಗಿರಲಿದೆ ಅಂತ ಹೇಳಿದೆ.ಅಂದ್ಹಾಗೆ ಇದರಲ್ಲಿ 268 ಪ್ರಕರಣಗಳು ಮಾತ್ರ ಕೊರೊನಾ ಲಕ್ಷಣಗಳನ್ನ ಹೊಂದಿವೆ ಅಂತಲೂ ಅಲ್ಲಿನ ಆಡಳಿತ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply