ಶಶಿ ತರೂರ್‌ಗೆ ಕಾಂಗ್ರೆಸ್‌ ನಾಯಕರಿಂದ ಬೆದರಿಕೆ?

masthmagaa.com:

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೀಯ ರೇಸ್‌ನಲ್ಲಿರೊ ಸಂಸದ ಶಶಿ ತರೂರ್‌ಗೆ ಉತ್ತರ ಪ್ರದೇಶ ಭೇಟಿಯನ್ನ ಎರಡೆರಡು ಸಲ ತಡೆಹಿಡಿಯಲಾಗಿದೆ. ಪ್ರತಿಸ್ಪರ್ಧಿ ಹಿರಿಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ಯುಪಿಯಲ್ಲಿ ನಿನ್ನೆ ಚುನಾವಣಾ ಅಭಿಯಾನ ಮಾಡೋಕೆ ಮುಂಚೆಯೇ ನಿಗದಿಪಡಿಸಿದ್ರು. ಹೀಗಾಗಿ ಇಬ್ಬರ ಬೆಂಬಲಿಗರ ನಡುವೆ ಆಗುವ ಘರ್ಷಣೆಯನ್ನ ತಡೆಯೋಕೆ ತರೂರ್‌ರ ಯುಪಿ ವಿಸಿಟ್‌ನ್ನ ತಡೆಯಲಾಗಿದೆ ಅಂತ ಕಾಂಗ್ರೆಸ್‌ ಹೇಳಿದೆ. ಹಂಗ್‌ ನೋಡೋದಾದ್ರೆ ಯುಪಿಯಲ್ಲಿ ಖರ್ಗೆ ಅವ್ರಿಗೆ ಗಲಾಟೆ ಮಾಡಲು ಮುಂದೆ ಬರುವಷ್ಟು ವೈಯಕ್ತಿಕ ಫ್ಯಾನ್ಸ್ ಅಂತೆಲ್ಲ ಇಲ್ಲ. ಇದೊಂದ್‌ ರೀತಿ ತರೂರ್‌ಗೆ ಇನ್‌ಡೈರೆಕ್ಟ್‌ ಬೆದರಿಕೆ. ಅಂದ್ರೆ ಅಲ್ಲಿ ಹೋದ್ರೆ, ಏನ್ ಮಾಡ್ಬೇಕು ಅಂತ ನಮ್ಗೆ ಗೊತ್ತು ಅನ್ನೋ ಥರ. ಖರ್ಗೆ ಹೈಕಮಾಂಡ್ ಕ್ಯಾಂಡಿಡೇಟ್ ಅನ್ನೋದು ಕೂಡ ಸ್ಪಷ್ಟ. ಆದ್ರೆ ಖರ್ಗೆ ಇದನ್ನ ನಿರಾಕರಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುವಂತೆ ತಮ್ಮ ಹೆಸರನ್ನ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿರಲಿಲ್ಲ ಅಂತ ಹೇಳಿದ್ದಾರೆ. ಇತ್ತ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷನಾದ್ರೆ, ಕಾರ್ಯಕಾರಿ ಸಮಿತಿ (CWC)ಯ ಚುನಾವಣೆ ನಡೆಸ್ತೀನಿ ಅಂತ ತರೂರ್‌ ಘೋಷಣೆ ಮಾಡಿದ್ದಾರೆ. 25 ವರ್ಷಗಳಿಂದ ಸ್ಟಾಪ್‌ ಆಗಿರೋ CWC ಚುನಾವಣೆ ಮತ್ತೆ ಆರಂಭ ಮಾಡ್ತೀನಿ ಅಂತ ವಾಗ್ದಾನ ಮಾಡಿದ್ದಾರೆ.

-masthmagaa.com

 

 

Contact Us for Advertisement

Leave a Reply