ಜಾಹೀರಾತಿಗೆ ಪಶ್ಚಿಮ ಬಂಗಾಳದ ಫ್ಲೈಓವರ್ ಫೋಟೋ ಬಳಸಿದ ಯೋಗಿ ಸರ್ಕಾರ!

masthmagaa.com:

ಉತ್ತರ ಪ್ರದೇಶದಲ್ಲಿ ದಿನಪತ್ರಿಕೆಯೊಂದರಲ್ಲಿ ಯೋಗಿ ಆದಿತ್ಯನಾಥ್ ಸಾಧನೆಗಳ ಬಗ್ಗೆ ನೀಡಿರೋ ಫುಲ್​ಪೇಜ್ ಸರ್ಕಾರಿ ಜಾಹೀರಾತು ಈಗ ವಿವಾದಕ್ಕೆ ಕಾರಣವಾಗಿದೆ. ಅದ್ರಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಫ್ಲೈಓವರ್ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಮಮತಾ ಬ್ಯಾನರ್ಜಿ ಸಾಧನೆಯನ್ನು ತನ್ನ ಸಾಧನೆ ಅಂತ ಯೋಗಿ ಆದಿತ್ಯನಾತ್ ಬಿಂಬಿಸಿಕೊಳ್ತಿದ್ದಾರೆ ಅಂತ ಟಿಎಂಸಿ ಆರೋಪಿಸಿದೆ. ಇನ್ನು 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಲ್ಲಾ 403 ಸ್ಥಾನಗಳಲ್ಲಿ ಸ್ಪರ್ಧಿಸೋದಾಗಿ ಶಿವಸೇನೆ ಘೋಷಿಸಿದೆ. ಮತ್ತೊಂದ್ಕಡೆ ಈ ಹಿಂದೆ ಉತ್ತರ ಪ್ರದೇಶ ಪಂಚಾಯ್ತಿ ಚುನಾವಣೆ ವೇಳೆ ಲಖೀಂಪುರದಲ್ಲಿ ಮಹಿಳೆಯ ಸೀರೆ ಎಳೆದು ಸುದ್ದಿಯಾಗಿದ್ದ ಸಮಾಜವಾದಿ ಪಕ್ಷದ ನಾಯಕ ರಿತು ಸಿಂಗ್​ ಈಗ ಕಾಂಗ್ರೆಸ್ ಸೇರಿದ್ದಾರೆ.

-masthmagaa.com

Contact Us for Advertisement

Leave a Reply