ಸಿದ್ದರಾಮಯ್ಯ ಮಗ ರಾಕೇಶ್ ಸಾವಿಗೆ ಭೈರತಿ ಸುರೇಶ್ ಕಾರಣ: ಎಂಟಿಬಿ ಕೆಂಡ

ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಭೈರತಿ ಸುರೇಶ್ ಅವರೇ ಕಾರಣ ಎಂದು ಹೊಸಕೋಟೆಯ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕೆಂಡಕಾರಿದ್ದಾರೆ. ತಮ್ಮ ವಿರುದ್ಧ ಭೈರತಿ ಸುರೇಶ್ ಕಣಕ್ಕಿಳಿಯೋದರ ಬಗ್ಗೆ ಮಾತನಾಡಿದ ಅವರು, ಅವನಿನ್ನೂ ಬಚ್ಚ. ಅವನನ್ನು ಏನು ನನ್ನ ಮುಂದೆ ನಿಲ್ಲಿಸೋದು ಅಂತ ಹೇಳಿದ್ರು. ಇನ್ನು ಸಿದ್ದರಾಮಯ್ಯ ಹೋದಲ್ಲೆಲ್ಲಾ ಎಂಟಿಬಿ ನಾಗರಾಜ್‍ಗೆ ನಾನು ಟಿಕೆಟ್ ಕೊಟ್ಟಿದ್ದು, ಮಂತ್ರಿ ಮಾಡಿದ್ದು ಅಂತಾರೆ. ಆದ್ರೆ ನನಗೆ ಟಿಕೆಟ್ ಕೊಟ್ಟಿದ್ದು ಎಸ್.ಎಂ.ಕೃಷ್ಣ. ಸಿದ್ದರಾಮಯ್ಯ ಬರುವ ಮುನ್ನವೇ ನಾನು ಕಾಂಗ್ರೆಸ್‍ನಲ್ಲಿದ್ದೆ ಅಂತ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿದ ಭೈರತಿ ಸುರೇಶ್, ಹೊಸಕೋಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ನೋಡಿ ಎಂಟಿಬಿ ನಾಗರಾಜ್ ಗೆ ಹತಾಶೆಯಾಗಿದೆ ಅಂತ ಹೇಳಿದ್ದಾರೆ.

Contact Us for Advertisement

Leave a Reply