ಸಂವಿಧಾನ ಬದಲಾಯಿಸಿದ್ರೆ ದೇಶದಲ್ಲಿ ರಕ್ತಪಾತ: ಸಿದ್ದರಾಮಯ್ಯ

ಮೈಸೂರು: ಸಂವಿಧಾನ ಬದಲಾಯಿಸಲು ಹೋದ್ರೆ ರಕ್ತಪಾತ ನಡೆಯುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಟಿ.ನರಸೀಪುರದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ರಚಿಸಿದ ಅಂಬೇಡ್ಕರ್, ಯಾವುದೇ ಒಂದು ಜಾತಿಗಾಗಿ ಕೆಲಸ ಮಾಡಿಲ್ಲ. ಅವರು ಸಮಾಜದಲ್ಲಿ ಯಾರೆಲ್ಲಾ ಶೋಷಣೆಗೆ ಒಳಪಟ್ಟಿದ್ದಾರೋ..? ಜಾತಿವ್ಯವಸ್ಥೆಯಿಂದ ನೋವು ಅನುಭವಿಸಿದ್ದಾರೋ..? ಯಾರೆಲ್ಲ ಅವಕಾಶಗಳಿಂದ ವಂಚಿತರಾಗಿದ್ದಾರೋ..? ಅವರೆಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಭಾರತದ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನವಾದ ಅವಕಾಶವನ್ನು ನೀಡಿದ್ದಾರೆ. ಆದ್ರೆ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿರೋದ್ರಿಂದ ಭಾರತದ ಸಂವಿಧಾನ ಕಂಡರೆ ಕೆಲವರಿಗೆ ಆಗುವುದಿಲ್ಲ. ಸಂವಿಧಾನ ಬದಲಾಯಿಸಲು ಹೋದ್ರೆ ಈ ದೇಶದಲ್ಲಿ ರಕ್ತಪಾತವಾಗುತ್ತೆ ಅಂತ ಕೆಂಡಕಾರಿದ್ರು.

ಇನ್ನೊಂದು ವಿಶೇಷ ಅಂದ್ರೆ ಇದೇ ಕಾರ್ಯಕ್ರದಲ್ಲಿ ಚಾಮರಾಜನಗರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಕೂಡ ವೇದಿಕೆ ಹಂಚಿಕೊಂಡಿದ್ದರು.

Contact Us for Advertisement

Leave a Reply