ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ವಿರೋಧ!

masthmagaa.com:
ಮತಾಂತರ ಕಾನೂನು ಬಗ್ಗೆ ಚರ್ಚೆಯಾಗ್ತಿರೋ ಹೊತ್ತಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಇಬ್ರಾಹಿಂ ಭೇಟಿಯಾಗಿ ಚರ್ಚಿಸಿದ್ದಾರೆ. ನಂತರ ಮಾತಾಡಿದ ಸಿದ್ದರಾಮಯ್ಯ, ಮತಂತರ ನಿಷೇಧ ಕಾಯ್ದೆಯನ್ನು ನಾವು ವಿರೋಧಿಸ್ತೀವಿ. ಯಾವ ಕಾರಣಕ್ಕೂ ಜಾರಿಗೊಳಿಸಲು ಬಿಡೋದಿಲ್ಲ ಅಂತ ಹೇಳಿದ್ದಾರೆ. ನಂತರ ಮಾತಾಡಿದ ಸಿಎಂ ಇಬ್ರಾಹಿಂ ಕೂಡ, ಸಂವಿಧಾನದಲ್ಲೇ ಬಲವಂತವಾಗಿ ಮತಾಂತರ ಮಾಡೋದಕ್ಕೆ ಅವಕಾಶ ನೀಡಿಲ್ಲ. ಅದಕ್ಕಾಗಿ ಈಗ ಕಾನೂನು ತರೋ ಅಗತ್ಯವಿಲ್ಲ. ಎಷ್ಟೋ ಜನ ಸಾಬ್ರುಗಳು ಹಿಂದೂ ಧರ್ಮಕ್ಕೆ ಹೋದ್ರು.. ಆಗ ನಾವೇನಾದ್ರೂ ಹೇಳಿದ್ವಾ. ಅದು ಅವರವರ ಇಚ್ಛೆ.. ಒಂದ್ವೇಳೆ ಬಲವಂತವಾಗಿ ಯಾರಾದ್ರೂ ಮತಾಂತರ ಮಾಡಿದ್ರೆ ದೂರು ಪಡೆದು ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಹೊಸ ಕಾನೂನು ಮೂಲಕ ಬಿಜೆಪಿ ಸರ್ಕಾರ ಜನರ ಗಮನವನ್ನು ಬೇರೆ ಕಡೆ ಸೆಳೆಯೋಕೆ ಟ್ರೈ ಮಾಡ್ತಿದೆ ಅಂತ ಹೇಳಿದ್ರು. ಇದೇ ವೇಳೆ ಲವ್ ಜಿಹಾದ್ ಬಗ್ಗೆ ಪ್ರಶ್ನಿಸಿದಾಗ ಯಾವ್ ಲವ್ವು.. ಯಾವ್ ಜಿಹಾದು.. ಲವ್ ಇಲ್ಲದೆ ಮದ್ವೆಯಾಗಕ್ಕಾಗುತ್ತಾ ಅಂತ ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ಆಂಜನೇಯ ಮಾತಾಡಿ, ಬಿಜೆಪಿಯವರು ಕಾಯ್ದೆ ಜಾರಿಗೆ ತಂದ್ರೆ, ನಾವು ಅಧಿಕಾರಕ್ಕೆ ಬಂದ್ರೆ ಆ ಕಾಯ್ದೆಯನ್ನು ಸುಟ್ಟು ಹಾಕಿ, ಸಾಯಿಸ್ತೀವಿ ಅಂತ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply