ಬ್ರಿಟನ್ ರಾಣಿ ಎಲಿಜಬೆತ್​​ ಹತ್ಯೆಗೆ ಸಂಚು!

masthmagaa.com:

1919ರ ಜಲಿಯನ್​ವಾಲಾಬಾಗ್​ ನರಮೇಧಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಬ್ರಿಟನ್ ರಾಣಿ ಎಲಿಜಬೆತ್​​ರನ್ನು ಹತ್ಯೆ ಮಾಡೋ ಬೆದರಿಕೆ ಹಾಕಿದ್ದಾನೆ. ಈತನ ವಿಡಿಯೋವೊಂದು ವೈರಲ್ ಆಗಿದ್ದು, ಅದ್ರಲ್ಲಿ ಬಾಣದಂತಿರೋ ಶಸ್ತ್ರಾಸ್ತ್ರದ ಜೊತೆಗೆ ನೋಡಬಹುದಾಗಿದೆ. ಅಂದಹಾಗೆ ಇತ್ತೀಚೆಗೆ ಕ್ರಿಸ್​ಮಸ್ ಆಚರಣೆ ವೇಳೆ ವಿಂಡ್ಸರ್ ಕ್ಯಾಸಲ್​​ನಲ್ಲಿ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಲಾಗಿತ್ತು. ಬಂಧಿತನನ್ನು ಜಸ್ವಂತ್ ಸಿಂಗ್ ಚೈಲ್ ಅಂತ ಗುರುತಿಸಲಾಗಿತ್ತು. ಈಗ ವಿಡಿಯೋದಲ್ಲಿರೋ ವ್ಯಕ್ತಿ ಆತನೇ ಅಂತ ಹೇಳಲಾಗ್ತಿದೆ. ಈತ ಹಗ್ಗದ ಏಣಿ ಬಳಸಿ ಕೌಂಪೌಂಡ್ ದಾಟಿಕೊಂಡು ವಿಂಡ್ಸರ್ ಕ್ಯಾಸಲ್​​​ಗೆ ಬಂದಿದ್ದ. ರಾಣಿ ಇದ್ದ ಜಾಗದಿಂದ ಸುಮಾರು 500 ಮೀಟರ್ ದೂರದಲ್ಲಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಈ ವೇಳೆಯೂ ಆತನ ಕೈಯಲ್ಲಿ ಬಿಲ್ಲುಬಾಣದ ರೀತಿಯ ಶಸ್ತ್ರಾಸ್ತ್ರ ಇತ್ತು. ಆಗಿನ್ನೂ ವಿಡಿಯೋ ವೈರಲ್ ಆಗಿರಲಿಲ್ಲವಾದ್ದರಿಂದ ಆತನನ್ನು ಮೆಂಟಲ್ ಹೆಲ್ತ್ ಆಕ್ಟ್ ಅಡಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಆದ್ರೀಗ ಹರಿದಾಡ್ತಿರೋ ವಿಡಿಯೋದಲ್ಲಿ ವ್ಯಕ್ತಿ, ನನ್ನನ್ನು ಕ್ಷಮಿಸಿ.. ನಾನು ಏನ್ ಮಾಡಿದ್ದೀನೋ, ಈಗ ಏನ್ ಮಾಡೋಕೆ ಹೋಗ್ತಿದ್ದೀನೋ ಅದಕ್ಕೆ ನನಗೆ ಬೇಸರವಿದೆ. ನಾನು ಬ್ರಿಟನ್ ರಾಣಿ ಎಲಿಜಬೆತ್ ಹತ್ಯೆ ಮಾಡ್ತೀನಿ. 1919ರ ಜಲಿಯನ್​​ವಾಲಾಬಾಗ್ ದುರಂತದಲ್ಲಿ ಮೃತಪಟ್ಟವರ ಸಾವಿಗೆ ಈ ಮೂಲಕ ಸೇಡು ತೀರಿಸಿಕೊಳ್ತೀನಿ ಅಂತ ಹೇಳಿಕೊಂಡಿದ್ದಾನೆ. ಜೊತೆಗೆ ಯಾರೆಲ್ಲಾ ಬಣ್ಣದ ಕಾರಣಕ್ಕೆ ಪ್ರಾಣ ಕಳ್ಕೊಂಡ್ರೋ, ಬೇಧಬಾವವನ್ನು ಅನುಭವಿಸಿದ್ರೋ ಅವರ ಸೇಡು ನಾನು ತೀರಿಸಿಕೊಳ್ತೀನಿ.. ನಾನು ಭಾರತೀಯ, ಸಿಖ್​ ಅಂತ ಹೇಳಿಕೊಂಡಿದ್ದಾನೆ. ಈತನನ್ನು ನೋಡಿದ್ರೆ ಉದಮ್ ಸಿಂಗ್ ನೆನಪಾಗುತ್ತೆ. 1919ರ ಜಲಿಯನ್ ವಾಲಾಬಾಗ್​​ ಹತ್ಯಾಕಾಂಡದ ಬಳಿಕ ಉದಮ್ ಸಿಂಗ್ ಕೂಡ 21 ವರ್ಷ ಕಾದು, 1940ರಲ್ಲಿ ಲಂಡನ್​​ಗೇ ಹೋಗಿ ಹತ್ಯಾಕಾಂಡಕ್ಕೆ ಕಾರಣವಾಗಿದ್ದ ಡಯರ್​​​​ನನ್ನು ಹತ್ಯೆ ಮಾಡಿದ್ರು.

-masthmagaa.com

Contact Us for Advertisement

Leave a Reply