ದೇಶದಲ್ಲಿ ಒಂದೇ ದಿನ ದಾಖಲೆಯ 52,123 ಜನರಿಗೆ ಸೋಂಕು.. ಆಂಧ್ರದಲ್ಲಿ ಅತಿ ಹೆಚ್ಚು..!

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 52,123 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಭಾರತದಲ್ಲಿ ಒಂದು ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಕರಣ ದೃಢಪಟ್ಟಿರೋದು ಇದೇ ಮೊದಲು. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 15,83,792 ಆಗಿದೆ.

ಕಳೆದ 24 ಗಂಟೆಗಳಲ್ಲಿ 775 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 34,968ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 32,553 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 10,20,582 ಸೋಂಕಿತರು ಗುಣಮುಖರಾದಂತಾಗಿದ್ದು 5,28,242 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ಗುಣಮುಖ ಪ್ರಮಾಣ 64.44 ಪರ್ಸೆಂಟ್ ಇದೆ. ಸಾವಿನ ಪ್ರಮಾಣ 2.21 ಪರ್ಸೆಂಟ್ ಇದೆ. ಜುಲೈ 29ರಂದು ದೇಶದಲ್ಲಿ 4.46 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.81 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಸೋಂಕು ದೃಢಪಟ್ಟ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ಆಂಧ್ರದಲ್ಲಿ 10,093 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಸೋಂಕು ದೃಢಪಟ್ಟ ಎರಡನೇ ರಾಜ್ಯ ಆಂಧ್ರಪ್ರದೇಶವಾಗಿದೆ. ಮಹಾರಾಷ್ಟ್ರದಲ್ಲಿ ಈ ಹಿಂದೆ 10,576 ಪ್ರಕರಣ ದೃಢಪಟ್ಟಿತ್ತು.

ರಾಜ್ಯವಾರು ಸಕ್ರಿಯ ಪ್ರಕರಣಗಳು (ಟಾಪ್-10):

1. ಮಹಾರಾಷ್ಟ್ರ: 1.46 ಲಕ್ಷ ಪ್ರಕರಣ (14,463 ಸಾವು)

2. ಕರ್ನಾಟಕ: 67,000+ ಪ್ರಕರಣ (2,147 ಸಾವು)

3. ಆಂಧ್ರಪ್ರದೇಶ: 63,000+ ಪ್ರಕರಣ (1,213 ಸಾವು)

4. ತಮಿಳುನಾಡು: 57,000+ ಪ್ರಕರಣ (3,741 ಸಾವು)

5. ಉತ್ತರಪ್ರದೇಶ: 29,000+ ಪ್ರಕರಣ (1,530 ಸಾವು)

6. ಪಶ್ಚಿಮ ಬಂಗಾಳ: 19,000+ ಪ್ರಕರಣ (1,490 ಸಾವು)

7. ಬಿಹಾರ: 15,000+ ಪ್ರಕರಣ (278 ಸಾವು)

8. ತೆಲಂಗಾಣ: 14,000+ ಪ್ರಕರಣ (492 ಸಾವು)

9. ಗುಜರಾತ್: 13,000+ ಪ್ರಕರಣ (2,396 ಸಾವು)

10. ದೆಹಲಿ: 10,000+ ಪ್ರಕರಣ (3,907 ಸಾವು)

-masthmagaa.com

Contact Us for Advertisement

Leave a Reply