ಸ್ಮೃತಿ ಮಂಧಾನಾ ಹೊಸ ದಾಖಲೆ! ಏನದು..?

masthmagaa.com:

ಭಾರತದ ಮಹಿಳಾ ಕ್ರಿಕೆಟ್​ ತಂಡದ ಓಪನರ್​ ಸ್ಮೃತಿ ಮಂಧಾನಾ, ಪಿಂಕ್​ ಬಾಲ್​ ಟೆಸ್ಟ್​ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅವರದ್ದೇ ನೆಲದಲ್ಲಿ ನಡೀತಿರೋ ಮೊದಲ ಮತ್ತು ಏಕೈಕ ಟೆಸ್ಟ್​ ಮ್ಯಾಚ್​​ನಲ್ಲಿ ಈ ಸಾಧನೆ ಮಾಡಿದ್ದಾರೆ. ಒಟ್ಟು 216 ಎಸೆತ ಎದುರಿಸಿದ ಮಂಧಾನಾ 127 ರನ್ ಬಾರಿಸಿ ಔಟಾದ್ರು. ಇದರಲ್ಲಿ ಒಂದು ಸಿಕ್ಸ್​, 22 ಫೋರ್​ ಸೇರಿದ್ವು. ಇದು ಮಂಧಾನಾ ಅವರ ಚೊಚ್ಚಲ ಟೆಸ್ಟ್ ಶತಕ ಕೂಡ ಹೌದು. ಸದ್ಯ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಕಳೆದುಕೊಂಡು 276 ರನ್ ಬಾರಿಸಿದೆ.

-masthmagaa.com

Contact Us for Advertisement

Leave a Reply