ಗ್ರಹಣ ಸಂಭವಿಸೋದು ಹೇಗೆ..? ಇಲ್ಲಿದೆ ನೋಡಿ ಮಾಹಿತಿ!

masthmagaa.com:

ವಿಶ್ವದ ಹಲವು ಭಾಗಗಳಲ್ಲಿ ಇಂದು ಸೂರ್ಯಗ್ರಹಣ ಸಂಭವಿಸಿದೆ. ಇದನ್ನ ಭಾರತದಲ್ಲಿ ಕೇತುಗ್ರಸ್ಥ, ಖಂಡಗ್ರಾಸ ಸೂರ್ಯಗ್ರಹಣ ಅಂತ ಕೂಡ ಕರೆಯಲಾಗ್ತಿದೆ. ನಾರ್ವೆ, ಇಟಲಿ, ಟರ್ಕಿ, ಇಂಗ್ಲೆಂಡ್‌, ರಷ್ಯಾ, ಭಾರತ, ಸೇರಿದಂತೆ ಹಲವು ದೇಶಗಳಲ್ಲಿ ಇಂದು ಖಗೋಳ ವಿಸ್ಮಯ ಗೋಚರವಾಗಿದೆ. ಸುಮಾರು 4 ಗಂಟೆಗಳ ಕಾಲ ಸೂರ್ಯನಿಗೆ ಗ್ರಹಣ ತಾಗಿ ಬಾನಂಗಳದಲ್ಲಿ ಅಚ್ಚರಿ ಕಂಡು ಬಂದಿದೆ. ಈ ಸೂರ್ಯಗ್ರಹಣ 27 ವರ್ಷಗಳ ಬಳಿಕ ಸಂಭವಿಸಿದೆ ಅಂತ ಹೇಳಲಾಗ್ತಿದೆ. ಗ್ರಹಣವನ್ನ ಕೆಲವು ನಂಬಿಕೆಗಳ ಪ್ರಕಾರ ಅಪಶಕುನ ಅಂತ ಪರಿಗಣಿಸಲಾಗುತ್ತೆ. ಗರ್ಭಿಣಿ, ಬಾಣಂತಿಯರು ಹೊರಗೆ ಬರಬೇಡಿ, ಆ ಸಮಯದಲ್ಲಿ ಊಟ ಮಾಡಬಾರದು ಅಂತೆಲ್ಲಾ ಹೇಳಲಾಗುತ್ತೆ. ಇನ್ನು ಗ್ರಹಣದ ನಿಮಿತ್ತ ಇಂದು ರಾಜ್ಯದ ಹಲವು ಪ್ರಮುಖ ದೇವಾಸ್ಥಾನಗಳ ದರ್ಶನಕ್ಕೆ ತಡೆ ನೀಡಲಾಗಿತ್ತು.  ಗ್ರಹಣದ ನಂತರ ಹೋಮ ಹವನಗಳನ್ನ ಮಾಡಿ ದೇವಾಸ್ಥಾನದಲ್ಲಿ ಶುದ್ದಿಕಾರ್ಯ ಕೂಡ ಮಾಡಲಾಗ್ತಿದೆ. ಇನ್ನು ಗ್ರಹಣದ ಬಗ್ಗೆ ವಿಜ್ಞಾನ ಏನ್‌ ಹೇಳುತ್ತೆ ಅಂತ ನೋಡೋದಾದ್ರೆ, ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನ ಬೆಳಕನ್ನು ಭೂಮಿಗೆ ತಲುಪದಂತೆ ಸ್ವಲ್ಪ ಸಮಯದವರೆಗೆ ನಿರ್ಬಂಧಿಸಿದಾಗ ಈ ಸೂರ್ಯಗ್ರಹಣ ಸಂಭವಿಸುತ್ತದೆ. ಇದರಿಂದಾಗಿ ಸೂರ್ಯನ ಭಾಗ ಗೋಚರಿಸಲ್ಲ. ಸೂರ್ಯಗ್ರಹಣಗಳಲ್ಲಿ ಭಾಗಶಃ, ವಾರ್ಷಿಕ ಮತ್ತು ಸಂಪೂರ್ಣ ಸೂರ್ಯಗ್ರಹಣ ಅನ್ನೋ ಮೂರು ರೀತಿಯ ಗ್ರಹಣವನ್ನ ಗುರ್ತಿಸಲಾಗಿದೆ.

-masthmagaa.com

Contact Us for Advertisement

Leave a Reply