ಜಿಯಾ ಖಾನ್‌ ಕೊಲೆ ಕೇಸ್‌ನಿಂದ ಹೊರಬಂದ ಸೂರಜ್‌ ಪಾಂಚೋಲಿ !

masthmagaa.com:

ಬಾಲಿವುಡ್‌ ನಟಿ ಜಿಯಾ ಖಾನ್‌ 10 ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಜಿಯಾ ಖಾನ್‌ ಸಾವಿಗೆ ನಟ ಸೂರಜ್‌ ಪಾಂಚೋಲಿ ಕಾರಣ ಎಂದು ಹೇಳಲಾಗುತ್ತಿತ್ತು. 10 ವರ್ಷಗಳಿಂದ ಈ ವಿವಾದದ ಕುರಿತಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಇದೀಗ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಸೂರಜ್‌ ಪಾಂಚೋಲಿ ನಿರಪರಾಧಿ ಎಂದು ಸಾಬೀತಾಗಿದೆ.

2013ರ ಜೂನ್​ 3 ರಂದು ಜಿಯಾ ಖಾನ್‌ ಸಾವನ್ನಪ್ಪಿದ್ದರು. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಅನುಮಾನ ಮೂಡಿತ್ತು. ಜಿಯಾ ಖಾನ್‌ ಅವರ ತಾಯಿ ಇದು ಕೊಲೆ ಎಂದು ನಟ ಸೂರಜ್‌ ಪಾಂಚೋಲಿ ಮೇಲೆ ಆರೋಪ ಮಾಡಿದ್ದರು. ಜಿಯಾ ಖಾನ್​ ಮತ್ತು ಸೂರಜ್​ ಪಾಂಚೋಲಿ ಅವರು ರಿಲೇಶನ್​ಶಿಪ್​ನಲ್ಲಿ ಇದ್ದರು. ಜಿಯಾ ಖಾನ್‌ ಮನೆಯಲ್ಲಿ ಡೆತ್​ ನೋಟ್​ ಪತ್ತೆ ಆಗಿತ್ತು. ಡೆತ್‌ ನೋಟ್‌ನಲ್ಲಿ ಜಿಯಾ ಖಾನ್‌ ತಮ್ಮ ಹಾಗೂ ಸೂರಜ್‌ ಪಾಂಚೋಲಿ ಬಗೆಗಿನ ಸಂಬಂಧದ ಬಿರುಕಿನ ಬಗ್ಗೆ ಬರೆದಿದ್ದರು. ಸೂರಜ್‌ ಪಾಂಚೋಲಿಯಿಂದ ತಾನು ನೋವು ಅನಭಿವಿಸಿದ್ದೆ ಎಂದು ಎಳೆ ಎಳೆಯಾಗಿ ಪತ್ರದಲ್ಲಿ ಹೇಳಿದ್ದರು. ಹೀಗಾಗಿ ಸೂರಜ್‌ ಪಾಂಚೋಲಿ ವಿರುದ್ದ ಕೇಸ್‌ ದಾಖಲಾಗಿತ್ತು. 10 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಸೂರಜ್​ ಪಾಂಚೋಲಿ ನಿರಪರಾಧಿ ಎಂದು ತೀರ್ಪು ನೀಡಲಾಗಿದೆ.

ಪೋಲಿಸರ ಮೊದಲ ತನಿಖೆಯಲ್ಲಿಯೇ ಜಿಯಾ ಖಾನ್‌ ಅವರದು ಆತ್ಮಹತ್ಯೆ ಎಂದು ತಿಳಿದು ಬಂದಿತ್ತು. ಆದ್ರೆ ಈ ವಿಚಾರವನ್ನು ಜಿಯಾ ಖಾನ್‌ ಅವರ ತಂದೆ ತಾಯಿ ವಿರೋಧಿಸಿ ಸೂರಜ್‌ ಪಾಂಚೋಲಿ ವಿರುದ್ಧ ಆರೋಪ ಮಾಡಿದ್ದರು. 2015 ರಲ್ಲಿ ಕೇಸ್‌ನ್ನು ಸಿಬಿಐ ತನಿಖೆಗೆ ಒಳಪಡಿಸಲಾಗಿತ್ತು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಸೂರಜ್‌ ಪಾಂಚೋಲಿ ವಿರುದ್ಧ ಸಪ್ಲಿಮೆಂಟರಿ ಚಾರ್ಜ್​ಶೀಟ್​ ದಾಖಲಿಸಲಾಯಿತು. ತನಿಖೆಯ ಬಳಿಕ ಕೊಲೆ ಸಾಧ್ಯತೆಗಳು ಕಡಿಮೆ ಇವೆ. ಹೀಗಾಗಿ ಇದು ಆತ್ಮಹತ್ಯೆ ಎಂದು 2016 ರಲ್ಲಿ ಸಿಬಿಐ ವರದಿ ಮಾಡಿತ್ತು.

ಜಿಯಾ ಖಾನ್‌ ‘ನಿಶಬ್ದ್​’ , ‘ಘಜಿನಿ’ ಹಾಗೂ ‘ಹೌಸ್​ಫುಲ್​’ ಸಿನಿಮಾಗಳಲ್ಲಿ ನಟಿಸಿದ್ದಾರೆ. ʻನಿಶಬ್ದ್‌ʼ ಸಿನಿಮಾದಲ್ಲಿನ ಅವರ ನಟನೆಗೆ ಫಿಲ್ಮ್​ಫೇರ್​ ಪ್ರಶಸ್ತಿ ಸಿಕ್ಕಿತ್ತು.

-masthmagaa.com

Contact Us for Advertisement

Leave a Reply