ಎಲಾನ್ ಮಸ್ಕ್ ‘ಏಣಿ’ ಏರಿ ಗುರು ಗ್ರಹದ ಚಂದ್ರನೆಡೆಗೆ NASA!

masthmagaa.com:

ಬಾಹ್ಯಾಕಾಶಕ್ಕೆ ಏಣಿ ಹಾಕಿದ ಶೂರ ಎಲಾನ್ ಮಸ್ಕ್ ಗೆ ಹೊಸ ಗೆಲುವು ಸಿಕ್ಕಿದೆ. 2024ರಲ್ಲಿ ಅಮೆರಿಕ ಗುರು ಗ್ರಹದ ಅಸಂಖ್ಯ ಮೂನ್ ಗಳಲ್ಲಿ ಒಂದಾದ ಯುರೋಪಾಗೆ ಮಿಶನ್ ಕೈಗೊಳ್ಳೋಕೆ ಮುಂದಾಗಿದೆ. ಈ ಮಿಶನ್ ಗೆ ಮೊದಲು ನಾಸಾದ ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್ ಬಳಸಲು ಪ್ಲಾನ್ ಮಾಡಲಾಗಿತ್ತು. ಆದ್ರೆ ಈಗ ಕಡೇ ಗಳಿಗೆಯಲ್ಲಿ ತನ್ನದೇ ರಾಕೆಟ್ ನಂಬದ ನಾಸಾ ಎಲಾನ್ ಮಸ್ಕ್ ರ ಸ್ಪೇಸ್ ಎಕ್ಸ್ ಕಂಪನಿಯ ಫಾಲ್ಕಾನ್ ಹೆವಿ ರಾಕೆಟ್ ಆರಿಸಿಕೊಂಡಿದೆ. ಅಂದ್ರೆ ನಾಸಾ ದೂರದ ಗುರು ಗ್ರಹದ ಚಂದ್ರ ಯುರೋಪದ ಬಳಿ ಹೋಗೋಕೆ ಎಲಾನ್ ಮಸ್ಕ್ ರ ಈ ಫಾಲ್ಕಾನ್ ರಾಕೆಟ್ ಆಯ್ಕೆ ಮಾಡಿಕೊಂಡಿದೆ. ಇದು ಜಗತ್ತಿನ ಟಾಪ್ ಖಾಸಗಿ ಬಾಹ್ಯಾಕಾಶ ಕಂಪನಿ ಎನಿಸಿಕೊಂಡಿರೋ ಸ್ಪೇಸ್ ಎಕ್ಸ್ ಪಾಲಿಗೆ ಬಹುದೊಡ್ಡ ಗೆಲುವು ಅಂತಾನೇ ಬಿಂಬಿಸಲಾಗ್ತಿದೆ.
ಎಲಾನ್ ಮಸ್ಕ್ ರ ಫಾಲ್ಕಾನ್ ರಾಕೆಟ್ 2018ರಲ್ಲಿ ಲಾಂಚ್ ಆದ ಬಳಿಕ ಇದುವರೆಗೆ ಹಲವು ಖಾಸಗಿ ಹಾಗೂ ನಾಸಾ ಮಿಶನ್ ಗಳಲ್ಲಿ ಕೆಲಸ ಮಾಡಿದೆ. ಇದು ಟೇಕ್ ಆಫ್ ಆಗುವಾಗ ಉತ್ಪತ್ತಿ ಆಗೋ ಶಕ್ತಿ 747 ವಿಮಾನಗಳಿಗೆ ಸಮ. ಮೊದಲ ಬಾರಿಗೆ ಇದನ್ನ ಪ್ರಯೋಗಾತ್ಮಕವಾಗಿ ಹಾರಿಸಿದಾಗ ಇದರಲ್ಲಿ ಎಲಾನ್ ಮಸ್ಕ್ ರ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದ ರೋಡ್ಸ್ಟರ್ ಮಾಡೆಲ್ನ ಕಾರ್ ಇಟ್ಟು ಉಡಾಯಿಸಲಾಗಿತ್ತು.

-masthmagaa.com

Contact Us for Advertisement

Leave a Reply