ಆಸ್ಪತ್ರೆಯಲ್ಲಿ ಭೂತ..! ಭಯಾನಕ ವಿಡಿಯೋ ವೈರಲ್..

ಭೂತ ಪ್ರೇತ ಅಂದ್ರೆ ನಾವೆಲ್ಲಾ ಹೆಚ್ಚಾಗಿ ನಂಬೋದಿಲ್ಲ. ಆದ್ರೆ ಚಂಡೀಗಡದ ಆಸ್ಪತ್ರೆಯೊಂದರಲ್ಲಿ ಭಯಾನಕ ದೃಶ್ಯವೊಂದು ಸೆರೆಯಾಗಿದೆ. ಇಲ್ಲಿನ ಪೋಸ್ಟ್ ಗ್ರಾಜುಯೇಟ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ & ರಿಸರ್ಚ್ ಕಟ್ಟಡದ ಮುಂಭಾಗ ನಿಲ್ಲಿಸಿದ್ದ ವ್ಹೀಲ್ ಚೇರ್‍ಗಳು ಇದ್ದಕ್ಕಿದ್ದಂತೆ ಓಡಾಡಲು ಶುರುಮಾಡಿವೆ. ತೆರೆದ ಬಾಗಿಲಿನಿಂದ ಸೀದಾ ಇಳಿದು ಕೆಳಗೆ ಹೋಗಿದೆ. ಈ ದೃಶ್ಯ ಆಸ್ಪತ್ರೆಯ ಮುಂಭಾಗದಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಕ್ಯೂರಿಟಿ ಗಾರ್ಡ್, ನಾನು ನೀರು ಕುಡಿಯೋಕೆ ಹೊರಗೆ ಬಂದಿದ್ದೆ. ಆಗ ವ್ಹೀಲ್ ಚೇರ್ ತಾನಾಗಿಯೇ ಹೋಗುತ್ತಿರೋದನ್ನು ನೋಡಿದೆ ಅಂತ ಹೇಳಿದ್ದಾರೆ.

Contact Us for Advertisement

Leave a Reply