ಭಾರತಲ್ಲಿ ಸ್ಪುಟ್ನಿಕ್​-5ಗೆ ತಜ್ಞರ ಸಮಿತಿಯಿಂದ ಗ್ರೀನ್ ಸಿಗ್ನಲ್

masthmagaa.com:

ಭಾರತದಲ್ಲಿ ರಷ್ಯಾದ ಕೊರೋನಾ ಲಸಿಕೆ ಸ್ಪುಟ್ನಿಕ್ 5ಗೆ ತಜ್ಞರ ಸಮಿತಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ದೇಶದಲ್ಲಿ ನಿನ್ನೆಯಿಂದ ಲಸಿಕೆ ಉತ್ಸವ ಶುರುವಾದ್ರೂ ಲಸಿಕೆ ಕೊರತೆ ಎದುರಾಗಿದೆ ಅಂತ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರ ಡಿಸಿಜಿಐ ಗ್ರೀನ್ ಸಿಗ್ನಲ್ ಕೊಟ್ಟರೆ ಭಾರತದಲ್ಲಿ ಅನುಮತಿ ಪಡೆದ 3ನೇ ಲಸಿಕೆ ಸ್ಪುಟ್ನಿಕ್ 5 ಆಗಲಿದೆ. ಈಗಾಗಲೇ ದೇಶದಲ್ಲಿ ಅಸ್ಟ್ರಾಜೆನೆಕಾ ಆಕ್ಸ್​​ಫರ್ಡ್​​​ನ ಕೋವಿಶೀಲ್ಡ್​​ ಮತ್ತು ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್ ಬಳಕೆಯಲ್ಲಿದೆ. ಭಾರತದಲ್ಲಿ ರೆಡ್ಡೀಸ್​ ಲ್ಯಾಬೋರೇಟರಿ ಈ ಲಸಿಕೆ ಉತ್ಪಾದಿಸುತ್ತಿದ್ದು, ಬಳಕೆಗೆ ಅನುಮತಿ ಕೋರಿ ಫೆಬ್ರವರಿ 19ರಂದು ಅರ್ಜಿ ಸಲ್ಲಿಸಿತ್ತು. ಏಪ್ರಿಲ್ 1ರಂದು ಕೇಂದ್ರದ ತಜ್ಞರ ಸಮಿತಿ ಲಸಿಕೆಯ ಕುರಿತು ಸಂಪೂರ್ಣ ಮಾಹಿತಿ ಮತ್ತು ಪ್ರಯೋಗದ ಡೇಟಾ ಸಲ್ಲಿಸುವಂತೆ ತಿಳಿಸಿತ್ತು. ಅದರಂತೆ ರೆಡ್ಡೀಸ್ ಲ್ಯಾಬೋರೇಟರಿ ಲಸಿಕೆ ಕುರಿತು ಎಲ್ಲಾ ಮಾಹಿತಿಗಳನ್ನು ತಜ್ಞರ ಸಮಿತಿಗೆ ಸಲ್ಲಿಸಿತ್ತು. ರಷ್ಯಾದ ಗಮಲೇಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ & ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿರೋ ಲಸಿಕೆ ಇದಾಗಿದ್ದು, ಕೊರೋನಾ ವಿರುದ್ಧ ಶೇ.91.6ರಷ್ಟು ಪರಿಣಾಮಕಾರಿ ಅಂತ ರಷ್ಯಾ ಹೇಳಿದೆ. ಈ ಲಸಿಕೆ ಯುಎಇ, ವೆನುಜುಯೆಲಾ ಮತ್ತು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪ್ರಯೋಗ ನಡೆದಿದೆ. ಭಾರತದಲ್ಲಿ 18ರಿಂದ 99 ವರ್ಷ ವಯಸ್ಸಿನ 1600 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದೆ. ಅಕ್ಟೋಬರ್​​​​​ ವೇಳೆಗೆ ಭಾರತದಲ್ಲಿ ಮತ್ತೈದು ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗುತ್ತೆ ಅಂತ ನಿನ್ನೆಯಲ್ಲೇ ಮಾಹಿತಿ ಲಭ್ಯವಾಗಿತ್ತು.
-masthmagaa.com

Contact Us for Advertisement

Leave a Reply