ಶ್ರೀಲಂಕಾದಲ್ಲಿ ಆಹಾರ ತುರ್ತು ಪರಿಸ್ಥಿತಿ ಘೋಷಣೆ!

masthmagaa.com:

ಶ್ರೀಲಂಕಾದಲ್ಲಿ ಫೂಡ್ ಎಮರ್ಜೆನ್ಸಿ ಘೋಷಣೆಯಾಗಿದೆ. ಅಂದ್ರೆ ಆಹಾರದ ತುರ್ತು ಪರಿಸ್ಥಿತಿ. ಇಡೀ ದೇಶದಲ್ಲಿ ಆಹಾರ ಧಾನ್ಯಗಳ ಕೊರತೆ ಎದುರಾಗಿದೆ. ಹೊರದೇಶಗಳಿಂದ ಆಮದು ಮಾಡಿಕೊಳ್ಳೋಣ ಅಂದ್ರೆ ದೇಶದ ಬ್ಯಾಂಕುಗಳ ಬಳಿ ನಯಾ ಪೈಸೆ ಫಾರಿನ್ ಎಕ್ಸ್ಚೇಂಜ್ ಇಲ್ಲ. ಹೀಗಾಗಿ ಅಧ್ಯಕ್ಷ ಗೋಟಬಯಾ ರಾಜಪಕ್ಷಾ, ಪಬ್ಲಿಕ್ ಸೆಕ್ಯೂರಿಟಿ ಸುಗ್ರೀವಾಜ್ಞೆ ಹೊರಡಿಸಿ ಆಹಾರ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಇದರ ಪ್ರಕಾರ ಯಾರೇ ವ್ಯಾಪಾರಿಗಳು ಅಥವಾ ವ್ಯಕ್ತಿಗಳು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನ ಸ್ಟಾಕ್ ಮಾಡಿ ಇಟ್ಟುಕೊಂಡರೆ ಅದನ್ನ ಸೀಜ್ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಅಧಿಕಾರ ಸಿಗುತ್ತೆ. ಅಂತವರನ್ನ ಅರೆಸ್ಟ್ ಮಾಡೋಕೂ ಅವಕಾಶ ಆಗುತ್ತೆ.
ಅಲ್ಲಿನ ಇಂಧನ ಸಚಿವ ಉದಯ್ ಗಮ್ಮನ್ಪಿಲಾ ಅಂತೂ ದೇಶದ ಜನ ಪೆಟ್ರೋಲ್ ಡೀಸೆಲ್ ಅನ್ನ ಕಮ್ಮಿ ಬಳಸುವಂತೆ ಕರೆಕೊಟ್ಟಿದ್ದಾರೆ. ಆ ಮೂಲಕ ಫಾರಿನ್ ಎಕ್ಸ್ಚೇಂಜ್ ಉಳಿಸಿ ಅದನ್ನ ಆಹಾರ ಧಾನ್ಯ ತರಿಸೋಕೆ ಬಳಸಬಹುದು ಅಂತ ಹೇಳಿದ್ದಾರೆ. ಭಾರತದ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ ಗೋಡೌನ್ ಗಳಲ್ಲಿ ಪ್ರತೀ ವರ್ಷ ಆಹಾರ ಧಾನ್ಯ ಕೊಳೆತು ಹೋಗುತ್ತೆ. ಸ್ಯಾನಿಟೈಸರ್ ಮಾಡಕ್ಕೆಲ್ಲ ಅಕ್ಕಿ ಯೂಸ್ ಮಾಡ್ತಿದಾರೆ. ಸೋ ಅದನ್ನ ಶ್ರೀಲಂಕಕ್ಕೆ ಒಂದಷ್ಟು ಫ್ರೀ, ಒಂದಷ್ಟು ರಿಯಾಯಿತಿ ಬೆಲೆಗೆ ಕೊಟ್ರೆ, ಚೀನಾ ತೆಕ್ಕೆಗೆ ಹೋಗಿರೋ ಆ ಧ್ವೀಪ ರಾಷ್ಟ್ರವನ್ನ ವಾಪಾಸ್ ಸೆಳೆಯೋಕೆ ಒಳ್ಳೆ ಡಿಪ್ಲೋಮಸಿ ಆದ್ರೂ ಆಗ್ತಿತ್ತು.

-masthmagaa.com

Contact Us for Advertisement

Leave a Reply