ಶ್ರೀಲಂಕಾಗೆ 3750 ಕೋಟಿ ರೂಪಾಯಿ ಸಾಲದ ಆಫರ್ ನೀಡಿದ ಭಾರತ

masthmagaa.com:

ಭಾರತ ಶ್ರೀಲಂಕಾಗೆ 3750 ಕೋಟಿ ರೂಪಾಯಿಯ ಸಾಲದ ಆಫರ್ ನೀಡಿದೆ. ಈ ಮೂಲಕ ಚೀನಾದ ಸಾಲದ ಸುಳಿ ಹಾಗೂ ವಿದೇಶೀ ವಿನಿಮಯ ಕೊರತೆಯಿಂದ ಬೆಂಡಾಗಿರೋ ಶ್ರೀಲಂಕಾ ನೆರವಿಗೆ ಭಾರತ ಧಾವಿಸಿದೆ. ಈ ಹಿಂದೆಯೂ ಭಾರತ ಸುಮಾರು 7೦೦೦ ಕೋಟಿ ರೂಪಾಯಿ ಸಹಾಯ ಮಾಡಿತ್ತು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಗೂ ಶ್ರೀಲಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಷಾ ಮಾತುಕತೆ ಬಳಿಕ ಭಾರತ ಈ ಸಹಾಯದ ನಿರ್ಧಾರ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply