ರಾಜ್ಯದಲ್ಲಿ ಲಾಕ್​ಡೌನ್ ಸಡಿಲ.. ಆದ್ರೆ ಹೊಸ ಚಿಂತೆ ಶುರು!

masthmagaa.com:

ಕರ್ನಾಟಕದಲ್ಲಿ ಕೊರೋನಾ ಸಂಖ್ಯೆ ಕಡಿಮೆಯಾಗ್ತಿದ್ದು, ಆಸ್ಪತ್ರೆಗಳಲ್ಲಿ ತುಂಬಿ ತುಳುಕ್ತಿದ್ದ ಬೆಡ್​​ಗಳು ಈಗ ಖಾಲಿಯಾಗ್ತಿವೆ. ಇವತ್ತಿಂದ ಲಾಕ್​ಡೌನ್ ಕೂಡ ಸಡಿಲಗೊಳಿಸಲಾಗಿದೆ. ಅಂಗಡಿ-ಮುಂಗಟ್ಟುಗಳು ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅನುಮತಿ ನೀಡಿದ್ರೂ ಕೂಡ ರಸ್ತೆಗಳಲ್ಲಿ ವಾಹನಗಳ ಓಡಾಟ ತುಂಬಾ ಜಾಸ್ತಿಯಾಗಿದೆ. ಎಷ್ಟೋ ದಿನಗಳಾದ ಬಳಿಕ ಬೆಂಗಳೂರಿನ ಸರ್ಕಲ್​​ಗಳಲ್ಲಿ ಸಿಗ್ನಲ್ ಬೀಳೋಕೆ ಶುರುವಾಗಿದೆ. ಆದ್ರೆ ರಾಜ್ಯದ ಹಲವೆಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಪೇಶೆಂಟ್​​ಗಳ ಪೈಕಿ ಹೆಚ್ಚಿನವರು ಇನ್ನೂ ಐಸಿಯುನಲ್ಲೇ ಇದ್ದಾರೆ ಅನ್ನೋ ವಿಚಾರ ಅಂಕಿ ಅಂಶಗಳಿಂದ ಗೊತ್ತಾಗಿದೆ. ಬೆಂಗಳೂರು ಒಂದ್ರಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಾ ಇರೋ ಪೇಷೆಂಟ್​ಗಳ ಪೈಕಿ ಇನ್ನೂ 80 ಪರ್ಸೆಂಟ್​​ನಷ್ಟು ಮಂದಿ ಐಸಿಯು ಮತ್ತು ವೆಂಟಿಲೇಟರ್​ ಇರೋ ಐಸಿಯುನಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಅಂದ್ರೆ ಬೆಂಗಳೂರಿನ ನಿನ್ನೆ ಸಂಜೆವರೆಗಿನ ಅಂಕಿ ಅಂಶಗಳನ್ನ ಗಮನಿಸಿದ್ರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ 7200 ಕೊರೋನಾ ಪೀಡಿತರ ಪೈಕಿ, 5700 ಮಂದಿ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಐಸಿಯುನಲ್ಲಿದ್ದಾರೆ. ಅದೇ ರೀತಿ ಉಳಿದ ಜಿಲ್ಲೆಗಳ ಸರಾಸರಿ ನೋಡಿದ್ರೆ ಅಲ್ಲೂ ಅಷ್ಟೆ.. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ಪೇಷೆಂಟ್​​​ಗಳ ಪೈಕಿ 62 ಪರ್ಸೆಂಟ್​​ನಷ್ಟು ಇನ್ನೂ ತೀವ್ರ ನಿಗಾ ಘಟಕದಲ್ಲೇ ಇದ್ದಾರೆ.

-masthmagaa.com

Contact Us for Advertisement

Leave a Reply