2025ರ ವೇಳೆಗೆ ಚೀನಾ ತೈವಾನ್​ ವಶಕ್ಕೆ ಪಡೆಯುತ್ತೆ: ತೈವಾನ್ ರಕ್ಷಣಾ ಸಚಿವ

masthmagaa.com:

ಚೀನಾ ಮತ್ತು ತೈವಾನ್ ನಡುವಿನ ಸಂಘರ್ಷದ ಸ್ಥಿತಿ ದಿನೇ ದಿನೇ ಜಾಸ್ತಿಯಾಗುತ್ತಲೇ ಇದೆ. ಈ ಬಗ್ಗೆ ತೈವಾನ್ ಪಾರ್ಲಿಮೆಂಟ್​ನಲ್ಲೂ ಚರ್ಚೆ ನಡೆದಿದೆ. ಚೀನಾ ಜೊತೆಗಿನ ಸಂಘರ್ಷದ ಬಗ್ಗೆ ತೈವಾನ್ ರಕ್ಷಣಾ ಸಚಿವ ಚಿವ್ ಕ್ಯೋ ಚೆಂಗ್ ಮಾತನಾಡಿದ್ದಾರೆ. ಕಳೆದ 40 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಚೀನಾ ಈಗಾಗಲೇ ತೈವಾನ್​ನ್ನು ಅತಿಕ್ರಮಿಸೋ ಮಿಲಿಟರಿ ಶಕ್ತಿಯನ್ನು ಹೊಂದಿದೆ. 2025ರ ವೇಳೆಗೆ ಕಂಪ್ಲೀಟಾಗಿ ತೈವಾನ್​ನ್ನು ಅತಿಕ್ರಮಿಸೋ ತಾಕತ್ತನ್ನು ಗಳಿಸಿಕೊಳ್ಳುತ್ತೆ ಅಂತ ಹೇಳಿದ್ದಾರೆ. ಅಂದಹಾಗೆ ಕಳೆದ ಶುಕ್ರವಾರ ಚೀನಾ ನ್ಯಾಷನಲ್ ಡೇ ದಿನದಿಂದ ನಿರಂತರವಾಗಿ ಚೀನಾದ ಯುದ್ಧ ವಿಮಾನಗಳು ತೈವಾನ್​​ನ ಏರ್​ ಡಿಫೆನ್ಸ್ ಝೋನ್ ಪ್ರವೇಶಿಸುತ್ತಲೇ ಇದೆ.

ಮತ್ತೊಂದ್ಕಡೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ನಾನು ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್​​ಗೆ ಕಾಲ್ ಮಾಡಿ ತೈವಾನ್ ವಿಚಾರ ಮಾತಾಡಿದ್ದೀನಿ ಅಂತ ಹೇಳಿದ್ದಾರೆ. ನಾವಿಬ್ಬರೂ ತೈವಾನ್ ಒಪ್ಪಂದಕ್ಕೆ ಬದ್ಧರಾಗಿದ್ದೀವಿ. ಒಪ್ಪಂದ ಪಾಲಿಸೋದು ಬಿಟ್ಟು ಬೇರೆ ಯಾವುದೇ ಹೆಜ್ಜೆ ಇಡಲ್ಲ ಅಂತ ಭಾವಿಸಿದ್ದೀನಿ ಅಂತ ಹೇಳಿದ್ದಾರೆ. ಜೊತೆಗೆ ನಿಮ್ಮ ಒನ್ ಚೈನಾ ಪಾಲಿಸಿಯನ್ನು ನಾವು ಒಪ್ಪಿಕೊಂಡಿದ್ದೀವಿ. ತೈವಾನ್ ಬದಲಾಗಿ ಚೀನಾಗೇ ನಾವು ಮಾನ್ಯತೆ ನೀಡಿದ್ದೀವಿ. ತೈವಾನ್ ಬದಲಾಗಿ ಚೀನಾದ ಜೊತೆಗೆ ರಾಜತಾಂತ್ರಿಕ ಸಂಬಂಧವನ್ನು ಹೊಂದಿದ್ದೀವಿ. ತೈವಾನ್ ಸಂಬಂಧಿಸಿದಂತೆ ಇರೋ ತೈವಾನ್ ರಿಲೇಷನ್ ಆಕ್ಟ್​ನಲ್ಲೂ ಕೂಡ ಇದೇ ಹೇಳಿದ್ದೀವಿ. ಆದ್ರೆ ನೀವು ಕೂಡ ತೈವಾನ್ ವಿಚಾರವನ್ನು ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕು ಅಂತ ಜಿನ್​ಪಿಂಗ್​​ಗೆ ಹೇಳಿದ್ದೀನಿ ಅಂತ ಬೈಡೆನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply