ಆಗಸ್ಟ್ 31ರವರೆಗೆ ತಾಲಿಬಾನಿಗಳು ಸರ್ಕಾರ ರಚಿಸೋದಿಲ್ವಾ..? ಕಾರಣ ಏನು?

masthmagaa.com:

ತಾಲಿಬಾನಿಗಳು ಕಾಬೂಲ್​ನ್ನು ಕಂಟ್ರೋಲ್​​ಗೆ ತಗೊಂಡ್ಮೇಲೆ ಅವರು ಹೇಗೆ ಸರ್ಕಾರ ರಚಿಸಬಹುದು ಅನ್ನೋದರ ಮೇಲೆ ಜಗತ್ತಿನ ಕಣ್ಣು ನಿಟ್ಟಿದೆ. ಸದ್ಯ ಕಾಬೂಲ್​​ಗೆ ಬಂದಿರೋ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್ ಸರ್ಕಾರ ರಚನೆ ಸಂಬಂಧ ಮಾತುಕತೆ ಶುರು ಮಾಡಿದ್ದಾರೆ. ಜಿಹಾದಿ ನಾಯಕರು ಮತ್ತು ರಾಜಕೀಯ ನಾಯಕರೊಂದಿಗೆ ಚರ್ಚೆ ಮಾಡ್ತಿದ್ದಾರೆ ಅಂತ ತಾಲಿಬಾನ್ ವಕ್ತಾರರು ಮಾಹಿತಿ ನೀಡಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್, ಮುಂಬರುವ ವಾರಗಳಲ್ಲಿ ಆಡಳಿತದ ಚೌಕಟ್ಟನ್ನು ಜಗತ್ತಿನ ಮುಂದಿಡ್ತೀವಿ. ನಮ್ಮಲ್ಲಿರೋ ಕಾನೂನು, ಧಾರ್ಮಿಕ ಮತ್ತು ವಿದೇಶಾಂಗ ನೀತಿ ತಜ್ಞರು ಈ ಕಾರ್ಯ ಮಾಡ್ತಾರೆ ಅಂತ ಹೇಳಿದೆ. ಮತ್ತೊಂದು ಮೂಲದ ಪ್ರಕಾರ ಆಗಸ್ಟ್​ 31ರವರೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ಸ್ಥಾಪಿಸೋದಿಲ್ಲ. ಹೌದು.. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಧಿಕಾರಿಯೊಬ್ಬರು, ತಾಲಿಬಾನಿಗಳು ಎಷ್ಟೇ ಚರ್ಚೆ ನಡೆಸಿದ್ರೂ ಆಗಸ್ಟ್​ 31ರವರೆಗೆ ಸುಮ್ಮನಿರ್ತಾರೆ. ಸರ್ಕಾರ ಘೋಷಣೆ ಮಾಡಲ್ಲ. ಹೀಗಂತ ತಾಲಿಬಾನ್ ವಕ್ತಾರ ಅನಸ್ ಹಕ್ಕಾನಿಯವ್ರೇ ಹೇಳಿದ್ದಾರೆ ಅಂತ ತಿಳಿಸಿದ್ದಾರೆ. ಯಾಕಂದ್ರೆ ಅಮೆರಿಕದ ಜೊತೆಗೆ ತಾಲಿಬಾನಿಗಳ ಒಪ್ಪಂದವಾಗಿದ್ದು, ಅದರಂತೆ ಆಗಸ್ಟ್ 31ರವರೆಗೆ ಅಮೆರಿಕನ್ನರ ಸ್ಥಳಾಂತರಕ್ಕೆ ಅವಕಾಶ ನೀಡಬೇಕು.. ಅಲ್ಲಿಯವರೆಗೆ ಏನೂ ಮಾಡಲ್ಲ ಅಂತಿದ್ದಾರೆ ತಾಲಿಬಾನಿಗಳು. ಅದ್ರರ್ಥ ಏನು.. ಆಮೇಲೆ ಏನ್ ಮಾಡ್ತಾರೆ ಅಂತ ಜನರಲ್ಲಿ ಭಯ ಶುರುವಾಗಿದೆ. ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳ ಕಥೆ ಏನಾಗುತ್ತೆ..? ತಮ್ಮ ಮಾತಿನಂತೆ ನಡೆದುಕೊಳ್ತಾರಾ..? ಆಗಸ್ಟ್​ 31ರ ನಂತರವೂ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ ಅಂತ ಬೈಡೆನ್ ಹೇಳಿದ್ದಾರೆ.. ಅದಕ್ಕೆ ತಾಲಿಬಾನಿಗಳು ಬಿಡ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

-masthmagaa.com

Contact Us for Advertisement

Leave a Reply