ಪಂಜ್​ಶಿರ್​​​​ ಸುತ್ತುವರಿದ ತಾಲಿಬಾನಿಗಳು! ಈಗ ನೋಡಿ ಅಸಲಿ ಕಾದಾಟ!

masthmagaa.com:

ಅಂತಾರಾಷ್ಟ್ರೀಯ ಮಾಧ್ಯಮಗಳೆಲ್ಲಾ ಸೇರ್ಕೊಂಡು ಪಂಜ್​ಶಿರ್ ಗ್ಯಾಂಗ್ ಫೈಟರ್ಸ್​​ಗಳ ಬುಡಕ್ಕೆ ತಂದಿಟ್ಟ ಹಾಗೆ ಕಾಣ್ತಾ ಇದೆ. ಯಾಕಂದ್ರೆ ಇದೊಂದು ಇಡೀ ಅಫ್ಘಾನಿಸ್ತಾನದ 33 ಪ್ರಾಂತ್ಯಗಳು ಕಂಟ್ರೋಲ್​​ಗೆ ಬಂದ್ರೂ ಪಂಜ್​ಶಿರ್ ಮಾತ್ರ ತಾಲಿಬಾನಿಗಳ ಕಂಟ್ರೋಲ್​ಗೆ ಬಂದಿರಲಿಲ್ಲ. ಆದ್ರೀಗ ಅದನ್ನು ಕಂಟ್ರೋಲ್​​ಗೆ ತಗೊಳ್ಳೋಕೆ ಹೊರಟಿದೆ ತಾಲಿಬಾನ್ ಪಡೆ.. ಪಂಜ್​ಶಿರ್ ಪ್ರಾಂತ್ಯವನ್ನು ಶಾಂತಿಯುತವಾಗಿ ಹಸ್ತಾಂತರಿಸಲು ಅಲ್ಲಿನ ಅಧಿಕಾರಿಗಳು ಒಪ್ಪದ ಹಿನ್ನೆಲೆ ಅದನ್ನು ವಶಕ್ಕೆ ಪಡೆಯಲು ನಮ್ಮ ನೂರಾರು ಫೈಟರ್​ಗಳು ಆ ಕಡೆ ಹೊರಟಿದ್ದಾರೆ ಅಂತ ತಾಲಿಬಾನಿ ಮೂಲಗಳು ತಿಳಿಸಿತ್ತು. ಇದೀಗ ತಾಲಿಬಾನಿಗಳು ಪಂಜ್​ಶಿರ್​​ನ್ನು ಸುತ್ತುವರಿದು ದಾಳಿ ನಡೆಸೋಕೆ ಶುರು ಮಾಡಿದಾರೆ. ಈ ನಡುವೆ ಅಫ್ಘಾನಿಸ್ತಾನ ಉಸ್ತುವಾರಿ ಅಧ್ಯಕ್ಷ ಅಂತ ಹೇಳಿಕೊಂಡಿರೋ ಅಮರುಲ್ಲಾ ಸಲೇ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಾಲಿಬಾನಿಗಳ ಫೈಟರ್​ ಪಡೆ ಪಂಜ್​ಶಿರ್​​ ಬಳಿ ಬಂದಿರೋದನ್ನು ಖಚಿತಪಡಿಸಿದ್ದಾರೆ. ಅಂದಹಾಗೆ ಈ ಅಮರುಲ್ಲಾ ಸಲೇ ಕೂಡ ಪಂಜ್​ಶಿರ್ ಮೂಲದವರೇ ಆಗಿದ್ದಾರೆ. ಈಗಲೂ ಅಲ್ಲೇ ಇದ್ದಾರೆ. ಅಂದಹಾಗೆ ಗುಡ್ಡಗಾಡು ಪ್ರದೇಶವಾದ ಈ ಪಂಜ್​ಶಿರ್​​ನಲ್ಲಿ ಅಫ್ಘಾನಿಸ್ತಾನ್ ರೆಸಿಸ್ಟನ್ಸ್ ಫೋರ್ಸ್ ಕಂಟ್ರೋಲ್ ಇದೆ. ಈ ಗುಂಪಿನ ನೇತೃತ್ವವನ್ನು ಈ ಹಿಂದೆ 2001ರಲ್ಲಿ ತಾಲಿಬಾನಿಗಳಿಂದ ಹತರಾದ ಅಹ್ಮದ್ ಶಾ ಮಸ್ಸೌದ್​ ಮಗ ಅಹ್ಮದ್ ಮಸ್ಸೌದ್ ವಹಿಸಿದ್ದಾರೆ. ತಾಲಿಬಾನಿಗಳ ಕಂಟ್ರೋಲ್ ಬಳಿಕ ಇಡೀ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್ ವಿರೋಧಿ ಮುಜಾಹಿದ್​​ಗಳು, ಮಾಜಿ ಸೈನಿಕರು ಪಂಜ್​ಶಿರ್​​ಗೆ ಹೋಗ್ತಿದ್ದಾರೆ. ಈಗಾಗಲೇ 9 ಸಾವಿರ ಮಂದಿ ಒಟ್ಟಾಗಿದ್ದಾರೆ ಅಂತ ಈ ಫೋರ್ಸ್ ಮೂಲಗಳು ತಿಳಿಸಿದ್ವು. ಅದ್ರ ಬೆನ್ನಲ್ಲೇ ನಿನ್ನೆ ಗುಂಪಿನ ನಾಯಕ ಅಹ್ಮದ್ ಮಸ್ಸೌದ್ ಕೂಡ, ನಾವು ತಾಲಿಬಾನಿಗಳ ನಿರಂಕುಶ ಅಧಿಕಾರವನ್ನು ವಿರೋಧಿಸ್ತೀವಿ. ಯುದ್ಧವನ್ನು ಬಯಸೋದಿಲ್ಲ. ಮಾತುಕತೆಗೆ ರೆಡಿ ಇದ್ದೀವಿ. ಆದ್ರೆ ತಾಲಿಬಾನಿಗಳು ಇದೇ ಹಾದಿಯಲ್ಲಿ ಮುಂದುವರಿದ್ರೆ, ಉತ್ತಮ ಸರ್ಕಾರ ರಚಿಸದೇ ಇದ್ರೆ ನಾವು ಕಾದಾಟಕ್ಕೂ ರೆಡಿ ಇದೀವಿ.. ಅಫ್ಘಾನಿಸ್ತಾನವನ್ನು ರಕ್ಷಿಸ್ತೀವಿ.. ರಕ್ತಪಾತಕ್ಕೂ ರೆಡಿ ಅಂತ ಹೇಳಿದ್ದಾರೆ. ಇದ್ರ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ಹೊಗಳಿ ಹೊಗಳಿ ವರದಿ ಮಾಡಿದ್ವು. ಇದನ್ನ ನೋಡಿದ ತಾಲಿಬಾನಿಗಳು ಸಹಿಸ್ತಾರಾ..? ಈಗ ಗುಂಪು ಕಟ್ಕೊಂಡು ಪಂಜ್​ಶಿರ್​​ಗೆ ಹೋಗಿ ದಾಳಿ ಇಟ್ಟಿದ್ದಾರೆ. ಇನ್ನು ಇದೇ ಫೋರ್ಸ್​​​ ಪಂಜ್​​ಶಿರ್ ಪ್ರಾಂತ್ಯದ ಪಕ್ಕದಲ್ಲಿರೋ ಪಕ್ಕದ ಬಗ್ಲನ್ ಪ್ರಾಂತ್ಯದ ನಾಲ್ಕು ಜಿಲ್ಲೆಗಳನ್ನು ಅಫ್ಘಾನಿಸ್ತಾನ ರೆಸಿಸ್ಟನ್ಸ್ ಫೋರ್ಸ್​​​ ವಶಕ್ಕೆ ತೆಗೆದುಕೊಂಡಿದ್ರು. ಹೀಗಾಗಿ ಬಗ್ಲನ್ ಪಕ್ಕದಲ್ಲಿರೋ ಕುಂಡುಜ್​ ಪ್ರಾಂತ್ಯದಿಂದ ನೂರಾರು ತಾಲಿಬಾನಿಗಳು ಬಗ್ಲನ್​​ನತ್ತ ಹೊರಟಿದ್ದಾರೆ. ಅಲ್ಲಿ ಕೈತಪ್ಪಿರೋ ಜಿಲ್ಲೆಗಳನ್ನು ವಶಕ್ಕೆ ಪಡೆಯೋದು ಇವರ ಉದ್ದೇಶವಾಗಿದೆ. ಒಟ್ನಲ್ಲಿ ಇಡೀ ಅಫ್ಘಾನಿಸ್ತಾನ ತಾಲಿಬಾನಿಗಳ ಕಂಟ್ರೋಲ್​​ಗೆ ಬಂದಿದ್ರೂ ಪಂಜ್​ಶಿರ್​ನಲ್ಲಿ ಮತ್ತೊಂದು ಹಂತದ ಸಮರ ಶುರುವಾಗಿದೆ. ಇನ್ನು ಕಳೆದ 36 ಗಂಟೆಗಳಲ್ಲಿ 800 ಮಂದಿ ತಾಲಿಬಾನಿಗಳನ್ನು ಹತ್ಯೆ ಮಾಡಲಾಗಿದೆ ಅಂತ ವರದಿಯಾಗಿದೆ. ಆದ್ರೆ ಈ ಬಗ್ಗೆ ಇನ್ನೂ ಯಾವುದೇ ಮೂಲಗಳು ಅಧಿಕೃತಪಡಿಸಿಲ್ಲ.

-masthmagaa.com

Contact Us for Advertisement

Leave a Reply