ವಿಜಯ್‌ ವರ್ಮಾ ಡೇಟಿಂಗ್‌ ವದಂತಿ ಬಗ್ಗೆ ಕೊನೆಗೂ ಬಾಯಿಬಿಟ್ಟ ತಮನ್ನಾ!

masthmagaa.com:

ತಮನ್ನ ಕೊನೆಗೂ ಬಾಲಿವುಡ್‌ ನಟ ವಿಜಯ್‌ ವರ್ಮಾ ಅವರ ಜೊತೆಗಿನ ಡೇಟಿಂಗ್‌ ವದಂತಿ ಬಗ್ಗೆ ತೆರೆ ಎಳೆದಿದ್ದಾರೆ. ಗೋವಾದಲ್ಲಿ ನಡೆದ ನ್ಯೂ ಇಯರ್‌ ಪಾರ್ಟಿಯಲ್ಲಿ ತಮನ್ನಾ ಮತ್ತು ವಿಜಯ್‌ ವರ್ಮಾ ಕಿಸ್‌ ಮಾಡ್ತಾ ಇರೋದನ್ನ ನೋಡಿದ ಅಭಿಮಾನಿಗಳು ಇವರ ಮಧ್ಯೆ ಏನೋ ಇದೆ ಅಂತ ಮಾತಾಡೋಕೆ ಶುರು ಮಾಡಿದ್ರು. ಮುಂಬೈನಲ್ಲೂ ಕೂಡ ಆಗಾಗ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ತಾ ಇದ್ರು. ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ ತಮನ್ನಾ “ನಾನು ಮತ್ತು ವಿಜಯ್‌ ಒಟ್ಟಿಗೆ ಸಿನಿಮಾ ಮಾಡಿದೀವಿ, ಹಾಗಾಗಿ ಇಂತ ರೂಮರ್ಸ್‌ ಬರೋದು ಕಾಮನ್‌. ಅಂತಹ ವದಂತಿಗಳ ಬಗ್ಗೆ ನಾನು ಏನೂ ಮಾತಾಡೋದಿಲ್ಲ” ಅಂತ ಕೂಡ ಹೇಳಿದ್ರು. ಆದ್ರೆ ಈ ಬಾರಿ ನಿಜವಾಗ್ಲೂ ವಿಜಯ್‌ ಜೊತೆ ಹಬ್ಬಿರುವ ವದಂತಿ ಬಗ್ಗೆ ಮತ್ತೊಮ್ಮೆ ತಮನ್ನಾ ಬಹಿರಂಗಪಡಿಸಿದ್ದಾರೆ.

ಫಿಲ್ಮ್ ಕಂಪ್ಯಾನಿಯನ್ ಜೊತೆ ಸಂದರ್ಶನದಲ್ಲಿ ಮಾತನಾಡಿದ ತಮನ್ನಾ “ಯಾರಾದ್ರು ಜೊತೆ ನೀವ್‌ ಆಕ್ಟ್‌ ಮಾಡಿದ್ರಿ ಅಂದ್ರೆ ಅವರ ಜೊತೆ ಲವ್‌ ಆಗಬೇಕು ಅಂತ ಏನಿಲ್ಲ. ಯಾಕಂದ್ರೆ ನಾನು ಬೇಕಾದಷ್ಟು ಆಕ್ಟರ್‌ ಜೊತೆ ಹೀರೋಯಿನ್‌ ಆಗಿ ನಟಿಸಿದ್ದೀನಿ. ಯಾರಾದ್ರೂ ಒಬ್ಬರಿಗೆ ಅವರು ಇಷ್ಟ ಆಗ್ತಾರೆ ಅಂತ ಅಂದಾಗ ಅದು ತುಂಬಾನೇ ವೈಯಕ್ತಿಕವಾದಂತ ವಿಷಯ. ಅವರು ಏನ್‌ ಕೆಲಸ ಮಾಡ್ತಾರೆ ಅನ್ನೋದು ಕೂಡ ಮ್ಯಾಟರ್‌ ಆಗೋದಿಲ್ಲ ಅಂತ ಹೇಳಿದ್ರು.

ಇನ್ನು ಲಸ್ಟ್‌ ಸ್ಟೋರಿಸ್‌ 2 ಸಿನಿಮಾದ ಮೂಲಕ ವಿಜಯ್‌ ವರ್ಮಾ ಜೊತೆ ಫ್ರೆಂಡ್‌ಶಿಪ್‌ ಶುರು ಆಯ್ತು ಅನ್ನೋದರ ಬಗ್ಗೆ ಮಾತನಾಡಿದ ತಮನ್ನಾ ವಿಯಜ್‌ ವರ್ಮಾ ಬಗ್ಗೆ ಕೂಡ ಮಾತನಾಡಿದ್ದಾರೆ. ಕೂಡ ಇದೇ ಸಂದರ್ಶನದಲ್ಲಿ ತಮನ್ನಾ ಮಾತನಾಡಿದ್ದಾರೆ. “ನಾನು ಯಾವ್‌ ರೀತಿ ಹುಡುಗ ಬೇಕು ಅಂತ ಅಂದ್ಕೋಳ್ತಾ ಇದ್ನೋ ವಿಜಯ್‌ ಕೂಡ ಅದೇ ರೀತಿಯ ವ್ಯಕ್ತಿ. ನಮ್ಮ ಸಮಾಜದಲ್ಲಿ ಹುಡುಗಿ ತನ್ನ ಗಂಡನಿಗೋಸ್ಕರ ತನ್ನ ತನ್ನ ಇಡೀ ಜೀವನವನ್ನ ಬದಲಾಯಿಸಿಕೊಳ್ಳಬೇಕು ಅನ್ನೋದು ಇದೆ. ಆ ವ್ಯಕ್ತಿ ನಮ್ಮನ್ನ ಅರ್ಥ ಮಾಡಿಕೊಂಡಿದ್ದಾನಾ ಅಂತಾನೂ ಯೋಚನೆ ಮಾಡದೇ ಜೀವನ ಪೂರ್ತಿ ಅವನ ಜೊತೆ ದೈಹಿಕವಾಗಿ ಮಾತ್ರ ಇರ್ತೀವಿ. ಆದ್ರೆ ವಿಜಯ್‌ ಹಾಗಲ್ಲ ನನ್ನನ್ನ ನನ್ನ ಕೆಲಸದ ಜೊತೆಗೆ ಇಷ್ಟ ಪಟ್ಟಿದ್ದಾರೆ. ತುಂಬಾನೇ ಕಾಳಜಿ ಇರುವಂತ ವ್ಯಕ್ತಿ. ಅವರ ಎಲ್ಲಾ ಈಗೋವನ್ನ ಬಿಟ್ಟು ನನ್ನನ್ನ ಅಪ್ರೋಚ್‌ ಮಾಡಿದ್ರು, ನಾನು ಕೂಡ ಅವರ ಜೊತೆ ಕ್ಲೋಸ್‌ ಆದೆ” ಅಂತ ಹಾಡಿ ಹೊಗಳಿದ್ದಾರೆ.

-masthmagaa.com

Contact Us for Advertisement

Leave a Reply