ಮೋಟಾರ್‌ ಸೈಕಲ್‌ ಕಂಪನಿ ಶುರು ಮಾಡಿದ ತಮಿಳು ಸುಪರ್‌ ಸ್ಟಾರ್‌ ಅಜಿತ್‌ !

masthmagaa.com:

ತಮಿಳು ಸುಪರ್‌ ಸ್ಟಾರ್‌ ಅಜಿತ್‌ ಕುಮಾರ್‌ ಅವರಿಗೆ ಬೈಕ್‌ ಕ್ರೇಜ್‌ ಇರೋದು ಗೊತ್ತಿರೋ ವಿಷಯಾನೆ. ಯಾವಾಗಲೂ ಬೈಕ್‌ನಲ್ಲಿ ಸೋಲೋ ರೈಡ್‌ ಮಾಡ್ತಾನೆ ಇರ್ತಾರೆ. ಅದು ಕೂಡ ಒಂದು ದೇಶದಿಂದ ಇನ್ನೊಂದು ದೇಶಕ್ಕೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಹೊಸಾ ಮೋಟಾರ್‌ ಸೈಕಲ್‌ ಕಂಪನಿಯನ್ನ ಶುರು ಮಾಡಿದ್ದಾರೆ.

ಅಜಿತ್‌ ಅವರ ಎಕೆ. ಮೋಟೋ ರೈಡ್‌ ಎಂಬ ಟೂರಿಂಗ್‌ ಕಂಪನಿಯನ್ನ ನಿನ್ನೆ (ಮೇ 22) ಲಾಂಚ್‌ ಮಾಡಲಾಗಿದೆ ಅಂತ ಅವರ ಚಿತ್ರ ಪ್ರಚಾರಕ ಹೇಳಿದ್ದಾರೆ.

“ನನಗೆ ಬೈಕ್‌ಗಳು ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್‌ ಇದೆ. ಜೀವನ ಅನ್ನೋದು ಸುಂದರವಾದ ಜರ್ನಿ ಇದ್ದಂಗೆ. ಹಲವಾರು ತಿರುವುಗಳು ಮತ್ತು ಡ್ಯಾಮೇಜ್‌ ಆಗಿರುವ ರೋಡ್‌ಗಳು ಸಹ ಸಿಗತ್ತೆ. ಅದೆಲ್ಲವನ್ನ ನಾವು ಸ್ವೀಕರಿಸಬೇಕು. ನನ್ನ ಜೀವನದ ಉತ್ಸಾಹವನ್ನ ನಾನು ಮೋಟೋ ರೈಡ್‌ ಎಂಬ ಕಂಪನಿಯಾಗಿ ಮಾಡ್ತಾ ಇದೀನಿ. ಇದನ್ನ ನಿಮ್ಮೊಂದಿಗೆ ಹಂಚಿಕೊಳ್ತಾ ಇರೋದಕ್ಕೆ ತುಂಬಾನೇ ಖುಷಿ ಆಗ್ತಾ ಇದೆ” ಅಂತ ಅಜಿತ್‌ ಹೇಳಿದ್ದಾರೆ.

ಇನ್ನು ತನ್ನ ಮೋಟೋ ರೈಡ್‌ ಕಂಪನಿಯ ಬಗ್ಗೆ ಕೂಡ ಮಾತನಾಡಿದ್ದಾರೆ. “ಈ ಮೋಟೋ ರೈಡ್‌ ಕಂಪನಿ ಉತ್ಸಾಹಿಗಳಿಗೆ, ದೇಶ- ವಿದೇಶ ಸುತ್ತೋರಿಗೆ, ಸಾಹಸ ಮಾಡೋಕೆ ಇಷ್ಟ ಪಡೋರಿಗೆ ಅಂತ ಶುರು ಮಾಡಿದ್ದು. ಭಾರತದ ರಮಣೀಯ ಸ್ಥಳಗಳನ್ನ ಸುತ್ತಬೇಕು ಮತ್ತು ಯಾವತ್ತೂ ನೋಡದೇ ಇರುವಂತ ರೋಡ್‌ಗಳನ್ನ ನೀವು ಈ ಮುಖಾಂತರ ನೋಡಬಹುದು.” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply