masthmagaa.com:

ಜಮ್ಮು-ಕಾಶ್ಮೀರದ ನಾಟಿಪೋರಾದಲ್ಲಿ ಪಿಡಿಪಿ ನಾಯಕ ಹಾಜಿ ಪರ್ವೇಜ್ ಅಹ್ಮದ್ ನಿವಾಸಕ್ಕೆ ಉಗ್ರರು ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪಿಡಿಪಿ ನಾಯಕನ ಭದ್ರತಾ ಅಧಿಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳವನ್ನ ಸುತ್ತುವರಿದಿರುವ ಪೊಲೀಸರು ಉಗ್ರರಿಗಾಗಿ ಶೋಧಕಾರ್ಯ ಮುಂದುವರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪಿಡಿಪಿ ನಾಯಕ ಹಾಜಿ ಪರ್ವೇಜ್ ಅಹ್ಮದ್, ‘ಇಬ್ಬರು ಅಪರಿಚಿತರು ನನ್ನ ಮನೆಗೆ ನುಗ್ಗಿದ್ರು. ನನ್ನ ಮೇಲೆ ಈ ರೀತಿ ದಾಳಿ ನಡೆಯುತ್ತಿರೋದು ಇದು ಮೂರನೇ ಸಲ’ ಎಂದಿದ್ದಾರೆ.

-masthmagaa.com

Contact Us for Advertisement

Leave a Reply