ವಂಚನೆ ಆರೋಪ: UAEನಲ್ಲಿ ಗುಪ್ತಾ ಸಹೋದರರ ಬಂಧನ

masthmagaa.com:

ದಕ್ಷಿಣ ಆಫ್ರಿಕಾದಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿ, ಭ್ರಷ್ಟಾಚಾರ ಮಾಡಿದ ಆರೋಪದಲ್ಲಿ ಭಾರತ ಮೂಲದ ಗುಪ್ತಾ ಸಹೋದರರನ್ನ UAE ನಲ್ಲಿ ಬಂಧಿಸಲಾಗಿದೆ. ರಾಜೇಶ್ ಗುಪ್ತಾ ಮತ್ತು ಅತುಲ್‌ ಗುಪ್ತಾ ಅನ್ನೋ ಇಬ್ರು ದಕ್ಷಿಣ ಅಫ್ರಿಕಾದ ಹಿಂದಿನ ಅಧ್ಯಕ್ಷ ಜಾಕೋಬ್ ಜುಮಾ ಅವ್ರ ಅವಧಿಯಲ್ಲಿ ಸರ್ಕಾರದ ಹಣವನ್ನ ದೋಚಿದ್ದಾರೆ ಅಂತ ಅರೋಪ ಮಾಡಲಾಗಿತ್ತು. 2018ರಲ್ಲಿ ಝೂಮಾ ಅಧಿಕಾರ ಕಳೆದುಕೊಂಡ ನಂತ್ರ ಗುಪ್ತಾ ಸಹೋದರರು ದಕ್ಷಿಣ ಅಫ್ರಿಕಾವನ್ನ ಬಿಟ್ಟು ಹೋಗಿದ್ರು. ತದನಂತ್ರ ದಕ್ಷಿಣ ಅಫ್ರಿಕಾ ಮತ್ತು UAE ನಡುವೆ ಹಸ್ತಾಂತರದ ಒಪ್ಪಂದ ಆಗಿತ್ತು. ಇದರ ಪ್ರಕಾರ ಈಗ ಇಬ್ಬರನ್ನೂ ಯುಎಇ ಪೋಲಿಸರು ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply