ʻದ ಕಾಂಜ್ಯುರಿಂಗ್‌ʼ ಭೂತ ಬಂಗಲೆ ಮನೆ ಸೇಲ್‌! ತಗೊಂಡಿದ್ದು ಯಾರು ಗೊತ್ತಾ?

masthmagaa.com:

ʻದ ಕಾಂಜ್ಯುರಿಂಗ್‌ʼ 2013ರಲ್ಲಿ ಹಾಲಿವುಡ್‌ನಲ್ಲಿ ತೆರೆಕಂಡ ಅತ್ಯಂತ ಭಯಾನಕ ಸಿನಿಮಾ. ಇದೀಗ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಭೂತದ ಮನೆಯನ್ನ 1.5 ಮಿಲಿಯನ್‌ ಅಮೆರಿಕನ್‌ ಡಾಲರ್‌ ಅಂದ್ರೆ ಸುಮಾರು 11ಕೋಟಿಗು ಅಧಿಕ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಬೋಸ್ಟನ್‌ನ ರಿಯಲ್‌ ಎಸ್ಟೇಟ್‌ ಡೆವಲಪರ್‌ ಜಾಕ್ವೆಲಿನ್ ನುನೆಜ್ ಎಂಬುವರು ಈ ಮನೆ ಖರೀದಿಸಿದ್ದಾರೆ. ಜೊತೆಗೆ ಈ ಮನೆಯನ್ನ ಒಂದು ಕಲಿಕಾ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತೆ. ಯಾರಾದ್ರು ಆತ್ಮಗಳೊಂದಿಗೆ ಮಾತನಾಡ್ಬೇಕು, ಅಥವಾ ಆತ್ಮಗಳ ಬಗ್ಗೆ ಹೆಚ್ಚು ತಿಳಿದುಕೊಳ್ಬೇಕು ಅಂತ ಆದ್ರೆ ಇಲ್ಲಿಗೆ ಬರಬಹುದು ಅಂತ ಅವ್ರು ಹೇಳಿದ್ದಾರೆ. ಅಂದ್ಹಾಗೆ ಈ ಮನೆ ಅಮೆರಿಕಾದ ರೋಡ್ ಐಲ್ಯಾಂಡ್‌ನಲ್ಲಿದೆ.

-masthmagaa.com

Contact Us for Advertisement

Leave a Reply