1950ರಿಂದ 2015ರವರೆಗೆ 7.8 % ಕಮ್ಮಿಯಾದ ಹಿಂದೂಗಳ ಜನಸಂಖ್ಯೆ!

masthmagaa.com:

ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ ಭಾರತದ ಡೆಮಾಗ್ರಫಿ ಕುರಿತು ಸ್ಫೋಟಕ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ 1950ರಿಂದ 2015ರವರೆಗೆ ಭಾರತದಲ್ಲಿ ಹಿಂದೂಗಳ ಜನಸಂಖ್ಯೆಯ ಒಟ್ಟಾರೆ ಪ್ರಮಾಣ ಶೇ7.8ರಷ್ಟು ಕಮ್ಮಿಯಾಗಿದೆ ಅಂತ ಹೇಳಿದೆ. 1950ರಲ್ಲಿ ಹಿಂದೂ ಜನಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಶೇ84ರಷ್ಟಿತ್ತು. ಆದ್ರೆ 2015ರ ವೇಳೆಗೆ ಅದು 78ಪರ್ಸೆಂಟ್‌ಗೆ ಕುಸಿತ ಕಂಡಿದೆ ಅಂತ ವರದಿ ತಿಳಿಸಿದೆ. ಜೊತೆಗೆ ಇದೇ ಅವಧಿಯಲ್ಲಿ ಮುಸ್ಲಿಂರ ಜನಸಂಖ್ಯೆ ಬರೋಬ್ಬರಿ 43.15%, ಕ್ರೈಸ್ತರ ಜನಸಂಖ್ಯೆ 5.38% ಹಾಗೂ ಸಿಖ್ಖರ ಜನಸಂಖ್ಯೆ 6.58% ಜಾಸ್ತಿಯಾಗಿದೆ. ಬೌದ್ಧಧರ್ಮೀಯರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ ಅಂತ ಈ ರಿಪೋರ್ಟ್‌ ಹೇಳಿದೆ. ಇನ್ನು ಅಕ್ಕ ಪಕ್ಕದ ದೇಶಗಳ ಡೆಮಾಗ್ರಫಿ ಬಗ್ಗೆಯೂ ಆ ರಿಪೋರ್ಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಆ ಪೈಕಿ ನೇಪಾಳದಲ್ಲಿ ಅಲ್ಲಿನ ಬಹಸಂಖ್ಯಾತ ಹಿಂದೂ ಜನಸಂಖ್ಯೆಯಲ್ಲಿ 3.6 ಪರ್ಸೆಂಟ್‌ ಕಮ್ಮಿಯಾಗಿದೆ. ಹಾಗೇ ಮಯನ್ಮಾರ್‌ನಲ್ಲಿ ಅಲ್ಲಿನ ಬಹುಸಂಖ್ಯಾತ ಬೌದ್ದರು 10 ಪರ್ಸೆಂಟ್‌ ಕಮ್ಮಿಯಾಗಿದ್ದಾರೆ. ಆದರೆ ಪಾಕಿಸ್ತಾನ, ಬಾಂಗ್ಲಾಗಳಲ್ಲಿ ಅಲ್ಲಿನ ಬಹುಸಂಖ್ಯಾತರು ಜಾಸ್ತಿಯೇ ಆಗಿದಾರೆ ಅಂತ ಆ ರಿಪೋರ್ಟ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply