ಜೀವ ಬೆದರಿಕೆ ಪತ್ರ: ಸರ್ಕಾರದ ಮೊರೆ ಹೋದ ಸಾಹಿತಿಗಳು ಹಾಗೂ ಲೇಖಕರು

masthmagaa.com:

ಲೇಖಕರು ಹಾಗೂ ಸಾಹಿತಿಗಳು ಸೇರಿದಂತೆ ಕರ್ನಾಟಕದ ಒಟ್ಟು 15ಕ್ಕೂ ಹೆಚ್ಚು ಪ್ರಮುಖರಿಗೆ ಜೀವ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ ಹಾಗೂ ಲೇಖಕರು ಅತಂಕಗೊಂಡಿದ್ದು, ತಮಗೆ ರಕ್ಷಣೆ ನೀಡಿ ಅಂತ ಸರ್ಕಾರದ ಮೊರೆ ಹೋಗಿದ್ದಾರೆ. ಪ್ರೊ ಕೆ ಮರಳಸಿದ್ದಪ್ಪ, ಪ್ರೊ ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ, ಕುಂ ವೀರಭದ್ರಪ್ಪ ಸೇರಿದಂತೆ ಒಟ್ಟು 15 ಜನ ತಮಗೆ ಬೆದರಿಕೆ ಪತ್ರ ಬಂದಿದೆ ಅಂತ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಅವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಇದನ್ನ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿ ಅಂತ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿರೋ ಸಾಹಿತಿ ಕೆ. ಮರಳುಸಿದ್ದಪ್ಪ ಅವ್ರು, ಪ್ರೊಫೆಸರ್ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ರೀತಿಯಲ್ಲೇ ನಿಮ್ಮನ್ನೂ ಮುಗಿಸುತ್ತೇವೆ ಅಂತ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ ಅಂತ ಹೇಳಿದ್ದಾರೆ. ಇತ್ತ ಇದಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೆಲ‌ ಸಾಹಿತಿಗಳು ಸಮಯ ಕೇಳಿದ್ದಾರೆ. ಸಮಯ ನೀಡಿ ಭೇಟಿಯಾಗಿ ಅವರಿಗೆ ಬರೆದ ಪತ್ರವನ್ನ ಡಿಜಿಪಿಗೆ ಕಳುಹಿಸಿಕೊಡುತ್ತೇನೆ. ನಾವು ಎಂಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಇನ್ನೂ ಮರೆತಿಲ್ಲ. ಅಂತಹ ಸಂದರ್ಭದಲ್ಲಿ ಜೀವ ಬೆದರಿಕೆ ಬಂದಿದೆ ಅಂದ್ರೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತೆ. ಅಲ್ದೆ ರಕ್ಷಣೆ ನೀಡುವಂತೆ ಈಗಾಗಲೇ ಕಮಿಷನರ್, ಡಿಜಿಪಿಗೆ ಸೂಚನೆ ಕೊಟ್ಟಿದ್ದೇನೆ. ಈ ಪ್ರಕರಣವನ್ನ ನಾವು ಗಂಭೀರವಾಗಿ ತಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply