masthmagaa.com:

ರಾಜ್ಯದಲ್ಲಿ ಕೊರೋನಾ ಹೆಚ್ಚಾಗಿರೋ ಹಿನ್ನೆಲೆ ಸೆಮಿ ಲಾಕ್​ಡೌನ್​ ಜಾರಿಯಾಗುತ್ತೆ ಅಂತ ಕೆಲವೊಂದು ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೆ ಲಾಕ್​ಡೌನ್​, ಸೆಮಿ ಲಾಕ್​ಡೌನ್ ಅನ್ನೋದು ಇವತ್ತಿನ ಪರಿಸ್ಥಿತಿಗೆ ಅನ್ವಯವಾಗಲ್ಲ ಅಂತ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಆದ್ರೆ ಯಾವ ರೀತಿ ಕೊರೋನಾ ಹೆಚ್ಚಾಗುತ್ತಾ ಹೋಗುತ್ತೆ ಅನ್ನೋದನ್ನ ನೋಡಿಕೊಂಡು ಕ್ರಮ ಕೈಗೊಳ್ಳಬೇಕಾಗುತ್ತೆ. ಪರಿಸ್ಥಿತಿ ಎದುರಿಸಲು ನಮ್ಮ ಇಲಾಖೆ ಸಮರ್ಥವಾಗಿದೆ ಅಂತ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಲಾಕ್​ಡೌನ್ ಆಗಲೀ ಅಥವಾ ಸೆಮಿ ಲಾಕ್​ಡೌನ್ ಆಗಲೀ ಜಾರಿ ಆಗಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply