ಸ್ಯಾಂಕ್ಷನ್ಸ್​ ಪಟ್ಟಿಯಲ್ಲಿ ಈಗ ರಷ್ಯಾ ನಂ.​ 1.. ಉಳಿದ ದೇಶಗಳ ಪಟ್ಟಿ ನೋಡಿ

masthmagaa.com:

ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಸ್ಯಾಂಕ್ಷನ್ಸ್​ನಿಂದಾಗಿ ರಷ್ಯಾ ಈಗ ಜಗತ್ತಿನಲ್ಲಿ ಅತಿಹೆಚ್ಚು ಸ್ಯಾಂಕ್ಷನ್ಸ್​ಗೆ ಒಳಗಾದ ದೇಶ ಎನಿಸಿಕೊಂಡಿದೆ. ಇರಾನ್​ ಮತ್ತು ಸಿರಿಯಾವನ್ನ ಹಿಂದಿಕ್ಕಿರೋ ರಷ್ಯಾ ಸ್ಯಾಂಕ್ಷನ್ಸ್​ ಲಿಸ್ಟ್​ನಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ರಷ್ಯಾ ಮೇಲೆ ಒಟ್ಟು 5,532 ಸ್ಯಾಂಕ್ಷನ್ಸ್ ಇವೆ. ಇದರಲ್ಲಿ ಅರ್ಧಕ್ಕರ್ಧ ಸ್ಯಾಂಕ್ಷನ್ಸ್​ ಯುಕ್ರೇನ್​ ಮೇಲೆ ಆಕ್ರಮಣ ಮಾಡಿದ ಬಳಿಕ ಬಿದ್ದಿವೆ. ರಷ್ಯಾ ಮೇಲೆ ಅತಿಹೆಚ್ಚು ಸ್ಯಾಂಕ್ಷನ್ಸ್​ ಇರೋದು ಅಮೆರಿಕದ್ದು, ಸಾವಿರಕ್ಕೂ ಹೆಚ್ಚಿದೆ. ಇನ್ನು ಸ್ಯಾಂಕ್ಷನ್ಸ್​ ಪಟ್ಟಿಯಲ್ಲಿ ರಷ್ಯಾ ನಂತರದ ಸ್ಥಾನದಲ್ಲಿ ಇರಾನ್​ ಇದ್ದು, ಅದರ ಮೇಲೆ 3,616 ಸ್ಯಾಂಕ್ಷನ್ಸ್ ಇವೆ. ಮೂರನೇ ಸ್ಥಾನದಲ್ಲಿ ಸಿರಿಯಾ ಇದ್ದು, 2,608 ಸ್ಯಾಂಕ್ಷನ್ಸ್​ ಇವೆ. ನಾಲ್ಕನೇ ಸ್ಥಾನದಲ್ಲಿ ಕಿಮ್​​ ಜಾಂಗ್ ಉನ್​ರ ಉತ್ತರ ಕೊರಿಯಾ ಇದ್ದು, ತನ್ನ ಹೆಗಲ ಮೇಲೆ 2,077 ಸ್ಯಾಂಕ್ಷನ್ಸ್​ ಹೊತ್ತುಕೊಂಡಿದೆ. ನಂತರ ಸ್ಥಾನದಲ್ಲಿ ವೆನೆಝುವೆಲಾ, ಮ್ಯಾನ್ಮಾರ್​, ಕ್ಯೂಬಾ ಮುಂತಾದ ದೇಶಗಳಿವೆ.

-masthmagaa.com

Contact Us for Advertisement

Leave a Reply