5 ಕೋಟಿ ಮೌಲ್ಯದ ವಾಚ್ ಕದ್ದು ಓಡಿದ ಕಳ್ಳ..!

ಪ್ರಾನ್ಸ್‍ನಲ್ಲಿ ಜಪಾನ್ ಮೂಲದ ವ್ಯಕ್ತಿಯೊಬ್ಬರ 5 ಕೋಟಿ ಮೊತ್ತದ ವಾಚ್ ಕದ್ದು ಓಡಿಹೋಗಿದ್ದಾನೆ. ಜಪಾನ್ ಮೂಲದ ವ್ಯಕ್ತಿಯೊಬ್ಬರು ಪ್ಯಾರಿಸ್ ನ ನೆಪೋಲಿಯನ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಸಿಗರೇಟ್ ತರೋಕೆ ಅಂತ ಹೋಟೆಲ್‍ನಿಂದ ಹೊರಗೆ ಹೋಗಿದ್ದಾರೆ. ಈ ವೇಳೆ ಕಳ್ಳ ಕೈಯ್ಯಲ್ಲಿದ್ದ ವಾಚ್ ಕಿತ್ತುಕೊಂಡು ಓಡಿದ್ದಾನೆ.

ರಿಚರ್ಡ್ ಮಿಲ್ಲೆ ಕಂಪನಿಯ ಟರ್ಬಿಲ್ಲನ್ ಡೈಮಂಡ್ ಟ್ವಿಸ್ಟರ್ ವಾಚ್ ಇದಾಗಿದ್ದು, ಇದಕ್ಕೆ ಸುಮಾರು 5 ಕೋಟಿ ರೂಪಾಯಿ ಇದೆ. ಇತ್ತೀಚೆಗೆ ಪ್ಯಾರಿಸ್‍ನಲ್ಲಿ ಒಟ್ಟು 4 ಬಾರಿ ಇದೇ ಬ್ರಾಂಡ್ ವಾಚ್ ಕಳ್ಳತನ ನಡೆದಿದೆ. ಜೊತೆಗೆ ಜನವರಿಯಿಂದ ಈವರೆಗೆ ಸುಮಾರು 71 ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಆದ್ರೆ ಈಗ ವಾಚ್ ಕಳೆದುಕೊಂಡಿರೋ ಜಪಾನಿ ಅದೃಷ್ಟವಂತ ಅನ್ನಿಸುತ್ತೆ. ಯಾಕಂದ್ರೆ ವಾಚ್ ಕಿತ್ತುಕೊಂಡು ಹೋಗುವಾಗ ಕಳ್ಳ ತನ್ನ ಮೊಬೈಲ್ ಬೀಳಿಸಿಕೊಂಡು ಹೋಗಿದ್ದಾನೆ. ಇದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಶೀಘ್ರದಲ್ಲೇ ಕಳ್ಳನನ್ನು ಪತ್ತೆಹಚ್ಚುವ ಸಾಧ್ಯತೆ ಇದೆ.

Contact Us for Advertisement

Leave a Reply