ಕೇರಳದಲ್ಲಿ ಮತ್ತೊಂದು ಕೊರೋನಾವೈರಸ್ ಕೇಸ್..! ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ

ಕೇರಳ: ಭಾರತದ 3ನೇ ಕೊರೋನಾವೈರಸ್ ಕೇಸ್ ಕೇರಳದಲ್ಲಿ ಪತ್ತೆಯಾಗಿದೆ. ಈ ಹಿಂದಿನ 2 ಪ್ರಕರಣಗಳು ಕೂಡ ಕೇರಳದಲ್ಲಿಯೇ ಪತ್ತೆಯಾಗಿದ್ದವು. ಇದೀಗ 3ನೇ ಕೇಸ್ ಕೂಡ ಚೀನಾದಿಂದ ಮರಳಿದ ಕಂಜನ್​ಗಢ ಜಿಲ್ಲೆಯ ಕಾಸರಗೋಡು ಮೂಲದ ಓರ್ವ ವಿದ್ಯಾರ್ಥಿಯಲ್ಲಿ ಪತ್ತೆಯಾಗಿದೆ. ಇನ್ನೊಂದು ವಿಚಾರ ಅಂದ್ರೆ ಈ ಮೂವರೂ ವಿದ್ಯಾರ್ಥಿಗಳು ಚೀನಾದ ವುಹಾನ್​ನಿಂದ ಭಾರತಕ್ಕೆ ಮರಳಿದ್ದರು. ಸದ್ಯ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಚೀನಾದ ವುಹಾನ್​ನಲ್ಲಿ ಆರಂಭವಾದ ಈ ಮಾರಕ ವೈರಸ್ ವಿಶ್ವದ 20ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹರಡಿದೆ. ಈಗಾಗಲೇ ಚೀನಾದಲ್ಲಿ ಈ ವೈರಸ್​​ನಿಂದ 350ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

Contact Us for Advertisement

Leave a Reply