2007ರಲ್ಲಿ ಇದೇ ದಿನ ವಿಶ್ವಕಪ್ ಗೆಲುವು..! ಬಿಸಿಸಿಐ ಹೇಳಿದ್ದೇನು..?

ಭಾರತ ಟಿ-20 ವಿಶ್ವಕಪ್ ಗೆದ್ದ ಆ ಕ್ಷಣ ಎಲ್ಲರಿಗೂ ನೆನಪಿದ್ದೇ ಇರುತ್ತೆ. 2007ರಲ್ಲಿ ಇದೇ ದಿನ ಜೋಹಾನ್ಸ್ ಬರ್ಗ್ ಮೈದಾನದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ಟಿ-20 ವಿಶ್ವಕಪ್ ಗೆದ್ದಿತ್ತು. ಈ ಪಂದ್ಯದ 16 ಸೆಕೆಂಡ್ ವಿಡಿಯೋವನ್ನು ಬಿಸಿಸಿಐ ಶೇರ್ ಮಾಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಗೌತಮ್ ಗಂಭೀರ್ ಅವರ 75 ರನ್‍ಗಳ ನೆರವಿನಿಂದ 157 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಲಾಸ್ಟ್ ಓವರ್‍ನಲ್ಲಿ 13 ರನ್ ಬೇಕಾಗಿತ್ತು. ಈ ವೇಳೆ ಧೋನಿ ಜೋಗಿಂದರ್ ಶರ್ಮಾ ಅವರಿಗೆ ಬೌಲಿಂಗ್ ಕೊಟ್ರು. ಈ ರೋಚಕ ಕದನದಲ್ಲಿ ಧೋನಿ ರಣತಂತ್ರದಿಂದಾಗಿ ಭಾರತ 5 ರನ್‍ಗಳಿಂದ ರೋಚಕ ಗೆಲುವು ದಾಖಲಿಸಿತ್ತು. ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಕ್ರಿಕೆಟ್ ಅಭಿಮಾನಿಗಳು ಧೋನಿ ಮತ್ತು ತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.

Contact Us for Advertisement

Leave a Reply