ಯುದ್ಧಕ್ಕೆ ವಿರೋಧದ ನಡುವೆ 8 ಲಕ್ಷ ರೂ. ಜಾಕೆಟ್ ಧರಿಸಿ ಪುಟಿಜ್ ಶೋ!

masthmagaa.com:

ಯುಕ್ರೇನ್ ವಿರುದ್ಧದ ಯುದ್ಧ ತಾರ್ಕಿಕ ಅಂತ್ಯ ಕಾಣಿಸ್ತಿಲ್ಲ. ಮತ್ತೊಂದ್ಕಡೆ ಪುಟಿನ್​ನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗ್ತಿದೆ. ರಷ್ಯಾದಲ್ಲೇ ಅವರ ವಿರುದ್ದ ಪ್ರತಿಭಟನೆ ನಡೀತಿದ್ದು, ಸಾವಿರಾರು ಜನ ಅರೆಸ್ಟ್ ಆಗಿದ್ದಾರೆ. ಇದ್ರ ನಡುವೆಯೇ ವ್ಲಾಡಿಮಿರ್ ಪುಟಿನ್ ಬೃಹತ್ ರ್ಯಾಲಿ ನಡೆಸಿದ್ದಾರೆ. ಮಾಸ್ಕೋದಲ್ಲಿರೋ ಲುಝ್ನಿಕಿ ವರ್ಲ್ಡ್​ ಕಪ್ ಸ್ಟೇಡಿಯಂನಲ್ಲಿ ನಡೆದ ಈ ಸಮಾರಂಭದಲ್ಲಿ ಪುಟಿನ್ ಮಾತಾಡಿದ್ದಾರೆ. ಹತ್ತಾರು ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಷ್ಯಾದ ಬಾವುಟ ಮತ್ತು ಯುಕ್ರೇನ್ ಆಕ್ರಮಣದ ಸಂಕೇತವಾದ ಝಡ್​ ಅನ್ನೋ ಸಿಂಬಲ್ ಇರೋ ಬ್ಯಾನರ್ ಹಿಡಿದು ಯುಕ್ರೇನ್ ಆಕ್ರಮಣವನ್ನ ಬೆಂಬಲಿಸಿದ್ದಾರೆ. ಯುಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ದೇಶಗಳು ಹೇರಿರೋ ನಿರ್ಬಂಧಗಳಿಂದ ರಷ್ಯಾದ ಆರ್ಥಿಕತೆ ನೆಲಕ್ಕಚ್ಚಿ ಹೋಗ್ತಿದೆ. ಆದ್ರೂ ಕೂಡ ಪುಟಿನ್ ಶೋಕಿಗೇನೂ ಕಮ್ಮಿ ಆಗಿಲ್ಲ. ಈ ಕಾರ್ಯಕ್ರಮಕ್ಕೆ 10 ಸಾವಿರ ಯೂರೋ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 8.40 ಲಕ್ಷ ರೂಪಾಯಿ ಮೊತ್ತದ ಲೋರೋ ಪಿಯಾನಾ ಜಾಕೆಟ್ ಹಾಕ್ಕೊಂಡು ಬಂದಿದ್ರು. ಈ ವೇಳೆ ಮಾತನಾಡಿದ ಪುಟಿನ್, 2014ರಲ್ಲಿ ಕ್ರೈಮಿಯಾವನ್ನು ವಶಕ್ಕೆ ಪಡೆದ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡ್ತಿದ್ದೀವಿ. ಅವತ್ತು ಕ್ರೈಮಿಯಾವನ್ನು ನಾಝಿಗಳಿಂದ ಮುಕ್ತಗೊಳಿಸಿದ್ವಿ. ಈಗ ಯುಕ್ರೇನ್​ನಲ್ಲಿ ನಮ್ಮ ವೀರಯೋಧರು ಹೋರಾಟ ನಡೆಸ್ತಿದ್ದಾರೆ ಅಂತ ಹೇಳಿದ್ರು. ಆಗ ಅಲ್ಲಿ ನೆರೆದಿದ್ದ ಜನ ರಷ್ಯಾ ರಷ್ಯಾ ರಷ್ಯಾ ಅಂತ ಕೂಗ್ತಿದ್ರು. ಈ ವೇಳೆ ತಮ್ಮ ದಾಳಿಯನ್ನು ಮತ್ತೆ ಸಮರ್ಥಿಸಿಕೊಂಡ ಪುಟಿನ್​​, ಯುಕ್ರೇನ್ ಜನತೆಯನ್ನು ರಕ್ಷಿಸಲು, ನರಮೇಧ ತಪ್ಪಿಸಲು ಈ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೀವಿ ಅಂತ ಹೇಳಿದ್ದಾರೆ.ಯುಕ್ರೇನ್ ವಿರುದ್ಧದ ಯುದ್ಧ ತಾರ್ಕಿಕ ಅಂತ್ಯ ಕಾಣಿಸ್ತಿಲ್ಲ. ಮತ್ತೊಂದ್ಕಡೆ ಪುಟಿನ್​ನ್ನು ವಿಲನ್ ರೀತಿಯಲ್ಲಿ ಬಿಂಬಿಸಲಾಗ್ತಿದೆ. ರಷ್ಯಾದಲ್ಲೇ ಅವರ ವಿರುದ್ದ ಪ್ರತಿಭಟನೆ ನಡೀತಿದ್ದು, ಸಾವಿರಾರು ಜನ ಅರೆಸ್ಟ್ ಆಗಿದ್ದಾರೆ. ಇದ್ರ ನಡುವೆಯೇ ವ್ಲಾಡಿಮಿರ್ ಪುಟಿನ್ ಬೃಹತ್ ರ್ಯಾಲಿ ನಡೆಸಿದ್ದಾರೆ. ಮಾಸ್ಕೋದಲ್ಲಿರೋ ಲುಝ್ನಿಕಿ ವರ್ಲ್ಡ್​ ಕಪ್ ಸ್ಟೇಡಿಯಂನಲ್ಲಿ ನಡೆದ ಈ ಸಮಾರಂಭದಲ್ಲಿ ಪುಟಿನ್ ಮಾತಾಡಿದ್ದಾರೆ. ಹತ್ತಾರು ಸಾವಿರ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಷ್ಯಾದ ಬಾವುಟ ಮತ್ತು ಯುಕ್ರೇನ್ ಆಕ್ರಮಣದ ಸಂಕೇತವಾದ ಝಡ್​ ಅನ್ನೋ ಸಿಂಬಲ್ ಇರೋ ಬ್ಯಾನರ್ ಹಿಡಿದು ಯುಕ್ರೇನ್ ಆಕ್ರಮಣವನ್ನ ಬೆಂಬಲಿಸಿದ್ದಾರೆ. ಯುಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ದೇಶಗಳು ಹೇರಿರೋ ನಿರ್ಬಂಧಗಳಿಂದ ರಷ್ಯಾದ ಆರ್ಥಿಕತೆ ನೆಲಕ್ಕಚ್ಚಿ ಹೋಗ್ತಿದೆ. ಆದ್ರೂ ಕೂಡ ಪುಟಿನ್ ಶೋಕಿಗೇನೂ ಕಮ್ಮಿ ಆಗಿಲ್ಲ. ಈ ಕಾರ್ಯಕ್ರಮಕ್ಕೆ 10 ಸಾವಿರ ಯೂರೋ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 8.40 ಲಕ್ಷ ರೂಪಾಯಿ ಮೊತ್ತದ ಲೋರೋ ಪಿಯಾನಾ ಜಾಕೆಟ್ ಹಾಕ್ಕೊಂಡು ಬಂದಿದ್ರು. ಈ ವೇಳೆ ಮಾತನಾಡಿದ ಪುಟಿನ್, 2014ರಲ್ಲಿ ಕ್ರೈಮಿಯಾವನ್ನು ವಶಕ್ಕೆ ಪಡೆದ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಾಡ್ತಿದ್ದೀವಿ. ಅವತ್ತು ಕ್ರೈಮಿಯಾವನ್ನು ನಾಝಿಗಳಿಂದ ಮುಕ್ತಗೊಳಿಸಿದ್ವಿ. ಈಗ ಯುಕ್ರೇನ್​ನಲ್ಲಿ ನಮ್ಮ ವೀರಯೋಧರು ಹೋರಾಟ ನಡೆಸ್ತಿದ್ದಾರೆ ಅಂತ ಹೇಳಿದ್ರು. ಆಗ ಅಲ್ಲಿ ನೆರೆದಿದ್ದ ಜನ ರಷ್ಯಾ ರಷ್ಯಾ ರಷ್ಯಾ ಅಂತ ಕೂಗ್ತಿದ್ರು. ಈ ವೇಳೆ ತಮ್ಮ ದಾಳಿಯನ್ನು ಮತ್ತೆ ಸಮರ್ಥಿಸಿಕೊಂಡ ಪುಟಿನ್​​, ಯುಕ್ರೇನ್ ಜನತೆಯನ್ನು ರಕ್ಷಿಸಲು, ನರಮೇಧ ತಪ್ಪಿಸಲು ಈ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply