ಕೊರೋನಾ ನಿಯಯ ಉಲ್ಲಂಘಿಸಿದ ಪ್ರಧಾನಿಗೆ ದಂಡ ಹಾಕಿದ ಪೊಲೀಸ್ರು

masthmagaa.com:

ಕೊರೋನಾ ರೂಲ್ಸ್ ಅಂದ್ಮೇಲೆ ಎಲ್ಲರಿಗೂ ಸೇಮ್ ಆಗಿರ್ಬೇಕು. ಅದು ಜನ ಸಾಮಾನ್ಯರಿರಲಿ ಅಥವಾ ರೂಲ್ಸ್ ಜಾರಿಗೆ ತಂದ ಸರ್ಕಾರದ ಮುಖ್ಯಸ್ಥರೇ ಆಗಲಿ. ಈ ರೂಲ್ಸ್ ಅನ್ನ ಕಟ್ಟುನಿಟ್ಟಾಗಿ ಪಾಲಿಸಿದ ನಾರ್ವೆ ಪೊಲೀಸರು ಅಲ್ಲಿನ ಪ್ರಧಾನಿ ಎರ್ನಾ ಸೋಲ್​ಬರ್ಗ್​ಗೆ ದಂಡ ಹಾಕಿದ್ದಾರೆ. ಅಂದ್ಹಾಗೆ ಕೊರೋನಾ ಹಿನ್ನೆಲೆ 10​ ಜನರಿಗಿಂತ ಹೆಚ್ಚು ಜನರನ್ನ ಸೇರಿಸಬಾರ್ದು ಅಂತ ನಿಯಮ ನಾರ್ವೆಯಲ್ಲಿದೆ. ಆದ್ರೆ ಎರ್ನಾ ಸೋಲ್​​ಬರ್ಗ್ ತಮ್ಮ 60ನೇ ಬರ್ತ್​ಡೇ ಪಾರ್ಟಿಗೆ ಮನೆಯಲ್ಲಿ 13 ಜನರನ್ನ ಸೇರಿಸಿದ್ದಾರೆ. ಹೀಗಾಗಿ ಅವರಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು ಒಂದೂವರೆ ಲಕ್ಷ ದಂಡ ಹಾಕಿದ್ದಾರೆ. ಎರ್ನಾ ಕೂಡ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply