‘ವರ್ಷದ ವೃದ್ಧೆ’ ಅವಾರ್ಡ್ ರಿಜೆಕ್ಟ್ ಮಾಡಿದ ಬ್ರಿಟನ್ ರಾಣಿ!

masthmagaa.com:

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ವರ್ಷದ ವೃದ್ಧೆ ಅವಾರ್ಡ್ ಅನ್ನ ರಿಜೆಕ್ಟ್ ಮಾಡಿದ್ದಾರೆ. the oldie magazine ಈ ಅವಾರ್ಡ್ ಕೊಡುತ್ತೆ. ಈ ಹಿಂದೆ ಇದೇ ಅವಾರ್ಡ್ ಅನ್ನ ರಾಣಿ ಎಲಿಜಬೆತ್ ಅವರ ಹಸ್ಬೆಂಡ್ Prince Philip, ಹಾಗೂ ರಾಣಿಯ ತಾಯಿಗೂ ನೀಡಲಾಗಿತ್ತು. ಅದನ್ನವರು ಬಹಳ ಖುಷಿಯಿಂದ ಸ್ವೀಕರಿಸಿದ್ದರು.‌ ಆದ್ರೆ ರಾಣಿ ಎಲಿಜಬೆತ್ ಮಾತ್ರ ನಂಗೆ ವರ್ಷದ ವೃದ್ಧೆ ಅವಾರ್ಡ್ ಬೇಡ. ನಾನ್ ಅದ್ಕೆಲ್ಲ ಸೂಟಬಲ್ ಕ್ಯಾಂಡಿಡೇಟ್ ಅಲ್ಲ. ಬೇರೆ ಯಾರಾದರೂ ವಯಸ್ಸಾದವರಿಗೆ ಕೊಡಿ. ವಯಸ್ಸು ನೀವು ಹೇಗೆ ಫೀಲ್ ಮಾಡ್ಕೊತೀರೋ ಹಾಗೆ ಫೀಲ್ ಆಗುತ್ತೆ ಅಂತ ಹೇಳಿದ್ದಾರೆ 95 ವರ್ಷದ ಅಜ್ಜಿ ರಾಣಿ ಎಲಿಜಬೆತ್. ಮುಂದಿನ ವರ್ಷ ಬಂದ್ರೆ ಎಲಿಜಬೆತ್ 2 ರಾಣಿಯಾಗಿ 7೦ ವರ್ಷ/ಪ್ಲಾಟಿನಮ್ ಜುಬಿಲಿ ಆಗುತ್ತೆ. 1952 ರಲ್ಲಿ ಕಿಂಗ್ ಜಾರ್ಜ್ ನಂತರ ಇವ್ರು ರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದರು.

-masthmagaa.com

Contact Us for Advertisement

Leave a Reply