ಶಾಕಿಂಗ್..! ಬಿಜೆಪಿ ಶಾಸಕನ ಕಾರು ಅಪಘಾತ.. ಮೂವರ ಸಾವು

ಉಮಾಭಾರತಿ ಸೋದರಳಿಯ, ಬಿಜೆಪಿ ಶಾಸಕ ರಾಹುಲ್ ಸಿಂಗ್ ಲೋಧಿ ಕಾರು ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ತಿಕಮ್‍ಗಢ-ಚತ್ತಾರಪುರ ಮಾರ್ಗದಲ್ಲಿ ಈ ಘಟನೆ ನಡೆದಿದೆ. ತಿಕಮ್‍ಗಢ್- ಬಾಲದೇವಗಢ್ ಮಾರ್ಗವಾಗಿ ಬೈಕ್ ಸಾಗುತ್ತಿತ್ತು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಶಾಸಕರ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಿಕಮ್‍ಗಢ್ ನಿವಾಸಿಗಳಾದ ಬ್ರಿಜೇಂದ್ರ ಅಹಿರವಾರ್, ರವಿ ಅಹಿರವಾರ್ ಮತ್ತು ಮದನ್ ಮೃತಪಟ್ಟಿದ್ದಾರೆ. ಆದರೆ ಅಪಘಾತ ನಡೆದಾಗ ಶಾಸಕರು ಕಾರಿನಲ್ಲಿ ಇದ್ರಾ ಅಥವಾ ಕೇವಲ ಚಾಲಕ ಮಾತ್ರ ಇದ್ದನಾ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಿಕಮ್‍ಗಢದ ಖರಗ್‍ಪುರ ಕ್ಷೇತ್ರದ ಶಾಸಕರಾಗಿರುವ ರಾಹುಲ್ ಸಿಂಗ್ ಲೋದಿ, ಉಮಾ ಭಾರತಿಯವರ ಸೋದರಳಿಯ ಕೂಡ ಹೌದು. ಆದ್ರೆ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಘಟನೆ ನಡೆದ ಸ್ಥಳದಿಂದ 20 ಕಿಲೋಮೀಟರ್ ದೂರದಲ್ಲಿರುವ ಫುತುರೆಯಲ್ಲಿದ್ದೆ. ನನ್ನನ್ನು ಕರೆದೊಯ್ಯಲು ಡ್ರೈವರ್ ಬರುತ್ತಿದ್ದ ಈ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

Contact Us for Advertisement

Leave a Reply