ಮುಂಬೈನಲ್ಲಿ ಮೂವರು ನರ್ಸ್​​ಗಳಿಗೆ ಕೊರೋನಾ ಸೋಂಕು

masthmagaa.com:

ಮಹಾರಾಷ್ಟ್ರ: ಮುಂಬೈನ ವೋಕ್ಹಾರ್ಡ್ ಆಸ್ಪತ್ರೆಯ ಇಬ್ಬರು ನರ್ಸ್​​ಗಳಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಇಲ್ಲಿ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ. ಆದ್ರೆ ತಡವಾಗಿ ಅವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಇದೀಗ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಓರ್ವ ಪುರುಷ ಮತ್ತು ಓರ್ವ ಮಹಿಳಾ ನರ್ಸ್​​​ಗೆ ಸೋಂಕು ತಗುಲಿರೋದು ದೃಢವಾಗಿದೆ. ಸದ್ಯ ಇಬ್ಬರ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಚೇತರಿಸಿಕೊಳ್ಳಲಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

ಇನ್ನು ಜಸ್ಲಾಕ್ ಆಸ್ಪತ್ರೆಯ ನರ್ಸ್​ ಒಬ್ಬರಿಗೂ ಕೊರೋನಾ ಸೋಂಕು ತಗುಲಿದೆ. ಇಲ್ಲೂ ಅಷ್ಟೆ. ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರಂಭದಲ್ಲಿ ಈ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದ್ರೆ ನಂತರದಲ್ಲಿ ಸೋಂಕು ಪತ್ತೆಯಾಗಿದ್ದು, ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಈ ನರ್ಸ್​​ಗೂ ಈಗ ಸೋಂಕು ತಗುಲಿದೆ.

-masthmagaa.com

Contact Us for Advertisement

Leave a Reply